ADVERTISEMENT

ಬೆಳಕವಾಡಿ | ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಯುವಕನ ಕೊಲೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 5:16 IST
Last Updated 13 ಸೆಪ್ಟೆಂಬರ್ 2025, 5:16 IST
<div class="paragraphs"><p>ಸಾವು&nbsp; (ಪ್ರಾತಿನಿಧಿಕ ಚಿತ್ರ)</p></div>

ಸಾವು  (ಪ್ರಾತಿನಿಧಿಕ ಚಿತ್ರ)

   

ಬೆಳಕವಾಡಿ: ಸಮೀಪದ ನೆಲ್ಲಿಗೆರೆ-ದೊಡ್ಡಬೂವಳ್ಳಿಯ ನಂಜಾಪುರ ಏತ ನೀರಾವರಿ ಕಾಲುವೆ ರಸ್ತೆಯ ಬಳಿ ರಾಗಿ ಬೊಮ್ಮನಹಳ್ಳಿ ಗ್ರಾಮದ ಆರ್. ಎಂ. ಮಹದೇವಸ್ವಾಮಿ ಎಂಬುವರ ಪುತ್ರ ಜೆಸಿಬಿ ಡ್ರೈವರ್ ಆರ್.ಎಂ. ಮೋಹನ್ ಕುಮಾರ್ (24) ಅವರನ್ನು ಗುರುವಾರ ರಾತ್ರಿ ಮಾರಕಾಸ್ತ್ರದಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ.

‘ನನ್ನ ಅಣ್ಣ ಮೋಹನ್ ಕುಮಾರ್ ಮೊಬೈಲ್ ನಿಂದ ರಾತ್ರಿ 8 ಗಂಟೆಯಲ್ಲಿ ನನ್ನ ಮೊಬೈಲ್ ಗೆ ಲೊಕೇಶನ್ ಮೇಸೆಜ್ ಬಂದಿತ್ತು. ಅಲ್ಲಿಗೆ ನಾನು, ತಂದೆ, ಮಾವ ಹೋಗಿ ನೋಡಿದಾಗ ಕಿವಿ, ಮುಖ, ಬಲಗೈನ ಕಂಕಳಿನಲ್ಲಿ ಗಾಯವಾಗಿ ರಕ್ತ ಸ್ರಾವದಿಂದ ಅಣ್ಣ ಸತ್ತು ಹೋಗಿದ್ದ. ದುಷ್ಕರ್ಮಿಗಳನ್ನು ಬಂಧಿಸಿ, ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು’ ಮೃತನ ಸಹೋದರ ಆರ್.ಎಂ.ಮನೋಜ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ADVERTISEMENT

ಘಟನೆ ಸ್ಥಳಕ್ಕೆ ಪಿಎಸ್ಐ ಬಿ.ವಿ.ಪ್ರಕಾಶ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಸಂಬಂಧ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.