ಸಂತೇಬಾಚಹಳ್ಳಿ: ಇಲ್ಲಿನ ಭಾರತೀಪುರ ಕ್ರಾಸ್ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಬಿ.ಎನ್. ಕುಮಾರ್ ಉಪಾಧ್ಯಕ್ಷರಾಗಿ ಮಂಜುಳಾ ಅವಿರೋಧವಾಗಿ ಆಯ್ಕೆಯಾದರು.
ಆವಿಶ್ವಾಸ ನಿರ್ಣಯದಿಂದ ತೆರವಾಗಿದ್ದ ಸ್ಥಾನಗಳಿಗೆ ಚುನಾವಣೆ ನಡೆದು ಇವರಿಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾ ಅಧಿಕಾರಿ ಚಂದ್ರೇಗೌಡ ಆಯ್ಕೆಯನ್ನು ಘೋಷಿಸಿದರು.
ಅಧ್ಯಕ್ಷ ಕುಮಾರ್ ಮಾತನಾಡಿ, ‘ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳಿಗೆ ಮೂಲಸೌಕರ್ಯ ಕಲ್ಪಿಸುವ ಮೂಲಕ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮವಾಗಿ ಕಾರ್ಯ ನಿರ್ವಹಿಸುವೆ’ ಎಂದರು.
ಪಿಡಿಒ ದಿನೇಶ್, ಸದಸ್ಯರಾದ ಕೆಂಪರಾಜು, ಸುನಿಲ್, ಶಿವರಾಮ್, ಶಶಿಕಲಾ, ಗೌಡ ಪೂಜಾ ನರಸಿಂಹ, ಮಂಜೇಗೌಡ, ಕೃಷ್ಣವೇಣಿ, ಮೋಹನ್, ಜಯರಾಮ್, ಲಕ್ಷ್ಮಮ್ಮ, ಗೀತಾ ಮುಖಂಡರಾದ ಸಾರಂಗಿ ನಾಗರಾಜು, ನಟರಾಜು, ಕುಮಾರ್, ಯಶು, ದೇವರಾಜು, ಪ್ರಭಾಕರ್, ಶಿವಸ್ವಾಮಿ, ಶಶಿ,ರಾಮಾಚಂದ್ರ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.