
ಪ್ರಜಾವಾಣಿ ವಾರ್ತೆಕಿಕ್ಕೇರಿ: ಪಟ್ಟಣದ ರಾಜ್ಯ ಹೆದ್ದಾರಿಯಲ್ಲಿ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಬೈಕ್ ಹಾಗೂ ಬೊಲೆರೊ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ಹಿಂಬದಿ ಸವಾರ, ತೆಂಗಿನಘಟ್ಟದ ಅಣ್ಣೇಗೌಡ (53) ಮೃತಪಟ್ಟರು.
ಅಣ್ಣೇಗೌಡ ಅವರು ಸ್ನೇಹಿತ ನಂಜೇಗೌಡ ಅವರೊಂದಿಗೆ ಕೆ.ಆರ್.ಪೇಟೆ ಕಡೆಯಿಂದ ಗ್ರಾಮಕ್ಕೆ ಬರುತ್ತಿದ್ದಾಗ ಗಾರ್ಮೆಂಟ್ಸ್ ಬಟ್ಟೆ ವಸ್ತುಗಳನ್ನು ತುಂಬಿಕೊಂಡು ಶಿವಮೊಗ್ಗಕ್ಕೆ ಹೋಗುತ್ತಿದ್ದ ಬೊಲೆರೊ ವಾಹನ ಪಟ್ಟಣದ ಸರೋವರ ಪೆಟ್ರೋಲ್ ಬಂಕ್ ಬಳಿ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಅಣ್ಣೇಗೌಡ ಅವರ ತಲೆಗೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲೇ ಅಸುನೀಗಿದರು. ಬೊಲೆರೊ ಚಾಲಕನನ್ನು ಕಿಕ್ಕೇರಿ ಪೊಲೀಸರು ವಶಕ್ಕೆ ಪಡೆಯಲಾಗಿದೆ’ ಎಂದು ಇನ್‌ಸ್ಪೆಕ್ಟರ್ ರೇವತಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.