ಸಂತೇಬಾಚಹಳ್ಳಿ ಹೋಬಳಿಯ ಅಘಲಯ ಗ್ರಾಮದ ಆಯೋಜಿಸಿದ್ದ ರಾಜ್ಯಮಟ್ಟದ ಎತ್ತಿನಗಾಡಿ ಸ್ಪರ್ಧೆಗೆ ಶಾಸಕ ಎಚ್.ಟಿ ಮಂಜು ಚಾಲನೆ
ಸಂತೇಬಾಚಹಳ್ಳಿ: ಹೋಬಳಿಯ ಅಘಲಯ ಗ್ರಾಮದಲ್ಲಿ ಆಯೋಜಿಸಿದ್ದ ಹೊನ್ನಮ್ಮದೇವಿ ಹಾಗೂ ಕಾಲಭೈರವೇಶ್ವರ ಮೊದಲ ವರ್ಷದ ರಾಜ್ಯ ಮಟ್ಟದ ಜೋಡಿ ಎತ್ತಿನಗಾಡಿ ಓಟದ ಸ್ಪರ್ಧೆಗೆ ಶಾಸಕ ಎಚ್.ಟಿ ಮಂಜು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ‘ಗ್ರಾಮೀಣ ಭಾಗದ ಕ್ರೀಡೆಗಳು ನಶಿಸಿಹೋಗುತ್ತಿರುವ ಈ ದಿನಗಳಲ್ಲಿ ಜೋಡಿ ಎತ್ತಿನಗಾಡಿ ಸ್ಪರ್ಧೆ ಏರ್ಪಡಿಸಿರುವುದು ಸಂತೋಷದ ವಿಚಾರ. ಹಳ್ಳಿಕಾರ್ ತಳಿ ಸಂರಕ್ಷಣೆ ಮಾಡಬೇಕು’ ಎಂದರು.
ಆಯೋಜಕ ಅಜಯ್ ರಾಮೇಗೌಡ ಮಾತನಾಡಿ, ‘ಸ್ಪರ್ಧೆಯಲ್ಲಿ ವಿಜೇತ ಜೋಡಿ ಎತ್ತುಗಳ ಮಾಲೀಕರಿಗೆ ಪ್ರಥಮ ಬಹುಮಾನ ಒಂದು ದ್ವಿಚಕ್ರ ವಾಹನ, ₹30 ಸಾವಿರ, ದ್ವಿತೀಯ ಬಹುಮಾನ ಒಂದು ದ್ವಿಚಕ್ರ ವಾಹನ, ₹20 ಸಾವಿರ, ತೃತೀಯ ಬಹುಮಾನ ₹10 ಸಾವಿರ, ದ್ವಿಚಕ್ರ ವಾಹನ, ನಾಲ್ಕನೇ ಬಹುಮಾನ ₹30 ಸಾವಿರ ನಗದು ಬಹುಮಾನ ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸ್ಪರ್ಧಾರ್ಥಿಗಳಿಗೆ ಸಮಾಧಾನಕರ ಬಹುಮಾನವಾಗಿ ಟ್ರೋಫಿ ನೀಡಲಾಗುವುದು’ ಎಂದು ಹೇಳಿದರು.
ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಜಾನಕಿರಾಮ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಅಘಲಯ ರಮೇಶ್, ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಎ.ಎಸ್. ಶ್ರೀಧರ್, ಆಯೋಜಕ ಅಜಯ್, ನಾಗೇಂದ್ರ, ರಾಜೇಗೌಡ, ರಾಜೇಶ್, ಮಾಳಗೂರು ವೆಂಕಟೇಶ್, ಮುನಿರಾಜು, ನವೀನ್, ನುಂಗರಾಜು, ನಿಶ್ಚಿತ, ವೆಂಕಟೇಶ್, ಯೋಗಣ್ಣ, ರಾಮಣ್ಣ ಗಣೇಶ, ನಂದೀಶ್, ಸಂದೀಪ್, ವಿಷ್ಣುಗೌಡ, ಮಂಜುನಾಥ್ ಬಾಬು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.