ADVERTISEMENT

ಇಬ್ಬರು ಸಾವು: 106 ಮಂದಿಗೆ ಕೋವಿಡ್‌ ದೃಢ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2020, 16:18 IST
Last Updated 21 ಸೆಪ್ಟೆಂಬರ್ 2020, 16:18 IST

ಮಂಡ್ಯ: ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಸೋಮವಾರ ಮೃತಪಟ್ಟಿದ್ದು ಜಿಲ್ಲೆಯಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ 95ಕ್ಕೆ ಏರಿಕೆಯಾಗಿದೆ.

ಮದ್ದೂರು ತಾಲ್ಲೂಕಿನ 70 ವರ್ಷದ ವೃದ್ಧ, ಮಂಡ್ಯ ತಾಲ್ಲೂಕಿನ 75 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದಾರೆ. ಇಬ್ಬರೂ ಉಸಿರಾಟದ ತೊಂದರೆ, ನ್ಯುಮೊನಿಯಾ ಸೇರಿ ವಿವಿಧ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಸೋಮವಾರ ಹೊಸದಾಗಿ 102 ಮಂದಿಯಲ್ಲಿ ಕೋವಿಡ್‌–19 ಪತ್ತೆಯಾಗಿದ್ದು ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 9,263ಕ್ಕೆ ಹೆಚ್ಚಾಗಿದೆ.

ಮಂಡ್ಯ ತಾಲ್ಲೂಕಿನ 31 ಮಂದಿ, ಕೆ.ಆರ್‌.ಪೇಟೆ 18, ನಾಗಮಂಗಲ 17, ಶ್ರೀರಂಗಪಟ್ಟಣ 15, ಮಳವಳ್ಳಿ 13, ಪಾಂಡವಪುರ 7, ಮದ್ದೂರು ತಾಲ್ಲೂಕಿನ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ.

ADVERTISEMENT

ಕೋವಿಡ್‌ನಿಂದ ಗುಣಮುಖರಾದ 424 ಮಂದಿಯನ್ನು ವಿವಿಧ ಕೋವಿಡ್‌ ಕೇಂದ್ರಗಳಿಂದ ಬಿಡುಗಡೆ ಮಾಡಲಾಗಿದೆ. ಪಾಂಡವಪುರ 143, ಮಂಡ್ಯ 109, ಶ್ರೀರಂಗಪಟ್ಟಣ 71, ಮಳವಳ್ಳಿ 34, ಮದ್ದೂರು 31, ನಾಗಮಂಗಲ 25, ಕೆ.ಆರ್‌.ಪೇಟೆ ತಾಲ್ಲೂಕಿನ 11 ಮಂದಿಯನ್ನು ಬಿಡುಗಡೆ ಮಾಡಲಾಯಿತು. ಒಟ್ಟು ರೋಗಿಗಳಲ್ಲಿ ಇಲ್ಲಿಯವರೆಗೆ 7, 809 ಮಂದಿ ಗುಣಮುಖರಾಗಿದ್ದಾರೆ. 1,359 ಪ್ರಕರಣಗಳು ಸಕ್ರಿಯವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.