ADVERTISEMENT

ಇಬ್ಬರ ಸಾವು; 253 ಮಂದಿಗೆ ಕೋವಿಡ್‌

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2020, 16:33 IST
Last Updated 29 ಸೆಪ್ಟೆಂಬರ್ 2020, 16:33 IST

ಮಂಡ್ಯ: ಮಂಗಳವಾರ ಒಂದೇ ದಿನ 253 ಮಂದಿಗೆ ಕೋವಿಡ್‌–19 ದೃಢಪಟ್ಟಿದ್ದು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 10,784ಕ್ಕೆ ಏರಿಕೆಯಾಗಿದೆ. ಇಬ್ಬರು ಮೃತಪಟ್ಟಿದ್ದು ಸಾವಿನ ಸಂಖ್ಯೆ 103ಕ್ಕೆ ಹೆಚ್ಚಾಗಿದೆ.

ಮಂಡ್ಯ ತಾಲ್ಲೂಕಿನ 91, ಕೆ.ಆರ್‌.ಪೇಟೆ 49, ಪಾಂಡವಪುರ 38, ಮದ್ದೂರು 23, ಶ್ರೀರಂಗಪಟ್ಟಣ 22, ಮಳವಳ್ಳಿ 18, ನಾಗಮಂಗಲ ತಾಲ್ಲೂಕಿನ 12 ಮಂದಿಗೆ ಸೋಂಕು ದೃಢಪಟ್ಟಿದೆ.

ಮದ್ದೂರು ತಾಲ್ಲೂಕಿನ 55 ವರ್ಷದ ಮಹಿಳೆ, 75 ವರ್ಷದ ವೃದ್ಧೆ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಕೋವಿಡ್‌ ಕಾರ್ಯಸೂಚಿ ಅನ್ವಯ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು.

ADVERTISEMENT

ಕೋವಿಡ್‌ನಿಂದ ಗುಣಮುಖರಾದ 55 ಮಂದಿಯನ್ನು ಮಂಗಳವಾರ ಬಿಡುಗಡೆ ಮಾಡಲಾಯಿತು. ಒಟ್ಟು ರೋಗಿಗಳಲ್ಲಿ ಇಲ್ಲಿಯವರೆಗೆ 8,598 ಮಂದಿ ಗುಣಮುಖರಾಗಿದ್ದಾರೆ. 2,083 ಪ್ರಕರಣಗಳು ಸಕ್ರಿಯವಾಗಿವೆ.

ಕೋವಿಡ್‌ ಅಂಕಿ–ಅಂಶ

ಜಿಲ್ಲೆಯಲ್ಲಿ ಒಟ್ಟು: 10,784

ಸಕ್ರಿಯ ಪ್ರಕರಣ: 2,083

ಏರಿಕೆ: 253

ಗುಣಮುಖ: 8,598

ಏರಿಕೆ: 55

ಸಾವು: 103

ಏರಿಕೆ: 02

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.