ADVERTISEMENT

ಇಂದಿನಿಂದ ಮಕ್ಕಳಿಗೆ ಲಸಿಕೆ

ಮೊದಲ ಹಂತದಲ್ಲಿ 15 ಸಾವಿರ ಮಂದಿಗೆ ವಿತರಣೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2022, 2:30 IST
Last Updated 3 ಜನವರಿ 2022, 2:30 IST

ಮಂಡ್ಯ: ಜ.3ರಿಂದ ಜಿಲ್ಲೆಯ 15ರಿಂದ 18 ವರ್ಷದೊಳಗಿನವರಿಗೆ ಕೋವಿಡ್-19 ಲಸಿಕೆಗೆ ಚಾಲನೆ ನೀಡಲು ಆರೋಗ್ಯ ಇಲಾಖೆ ಸಿದ್ಧತೆ ಕೈಗೊಂಡಿದೆ.

ಜಿಲ್ಲೆಯಲ್ಲಿ 77,458 ಮಕ್ಕಳಿಗೆ ಲಸಿಕೆ ನೀಡಲು ಯೋಜನೆ ರೂಪಿಸಲಾಗಿದ್ದು, ಮೊದಲ ಹಂತದಲ್ಲಿ ಸೋಮವಾರ ಜಿಲ್ಲೆಯಾದ್ಯಂತ 15 ಸಾವಿರ ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ.

ಜಿಲ್ಲೆಗೆ 18,700 ಕೊವ್ಯಾಕ್ಸಿನ್‌ ಲಸಿಕೆ ಲಭ್ಯವಿದ್ದು, ಅದರಲ್ಲಿ ಕೆ.ಆರ್.ಪೇಟೆಯ 2,400, ಮದ್ದೂರು, ಮಳವಳ್ಳಿಯ 2 ಸಾವಿರ, ಮಂಡ್ಯದ 2,200, ನಾಗಮಂಗಲದ 2,400, ಪಾಂಡವಪುರದ 1,200 ಹಾಗೂ ಶ್ರೀರಂಗಪಟ್ಟಣದ 2,800 ಮಕ್ಕಳಿಗೆ ಲಸಿಕೆ ನೀಡಲಾಗುತ್ತದೆ.

ADVERTISEMENT

2007, ಅದಕ್ಕೂ ಮುನ್ನ ಜನಿ ಸಿದ ಮಕ್ಕಳು ಲಸಿಕೆ ಪಡೆಯಲು ಅರ್ಹರಾಗಿದ್ದು, ಶಾಲೆ, ಕಾಲೇಜು ಗಳಲ್ಲೂ ಲಸಿಕಾ ಕಾರ್ಯಕ್ರಮ ಆಯೋ ಜಿಸಲಾಗಿದೆ. ಲಸಿಕೆ ಪಡೆಯುವ ಮಕ್ಕಳು ಮೊಬೈಲ್ ಸಂಖ್ಯೆ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಆಧಾರ್ ಕಾರ್ಡ್ ಅಥವಾ ಶಾಲಾ ದಾಖಲಾತಿಯ ಮೂಲಕ ಕೋವಿನ್ ಪೋರ್ಟಲ್‌ನಲ್ಲಿ ಅಪ್ಲೋಡ್ ಮಾಡಿಸಬಹುದು. ಯಾವುದೇ ಟಿ.ಡಿ ಅಥವಾ ಇನ್ನಾವುದೇ ಲಸಿಕೆ ಪಡೆದಿದ್ದರೆ ಅಂಥ ಮಕ್ಕಳಿಗೆ 15 ದಿನಗಳ ನಂತರ ಲಸಿಕೆ ನೀಡಲಾಗುತ್ತದೆ. ಶಾಲೆಯಿಂದ ಹೊರಗುಳಿದ ಹಾಗೂ ಶಾಲೆ ಬಿಟ್ಟ ಮಕ್ಕಳಿಗೂ ಲಸಿಕೆ ನೀಡಲಾಗುತ್ತದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.