ADVERTISEMENT

ಬಾಲಕಿಯರಿಗೆ ಲೈಂಗಿಕ ಕಿರುಕುಳ: 20 ವರ್ಷ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2022, 19:18 IST
Last Updated 8 ಸೆಪ್ಟೆಂಬರ್ 2022, 19:18 IST
   

ಮಂಡ್ಯ: ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರ್.ಅಜಯ್ ಎಂಬಾತಗೆ ನಗರದ ಹೆಚ್ಚುವರಿ ಸೆಷನ್ಸ್‌ ಮತ್ತು 2ನೇ ತ್ವರಿತಗತಿ ನ್ಯಾಯಾಲಯವು 20 ವರ್ಷಗಳ ಕಠಿಣ ಶಿಕ್ಷೆ ಹಾಗೂ ₹35,000 ದಂಡ ವಿಧಿಸಿದೆ.

ಚಾಕೋಲೆಟ್‌, ತಿಂಡಿ ನೀಡುವುದಾಗಿ ಮೂವರು ಬಾಲಕಿಯರನ್ನು ಪುಸಲಾಯಿಸಿದ್ದ ಅಜಯ್‌, ನಾಲ್ಕು ದಿನ ಅಕ್ರಮ ಬಂಧನದಲ್ಲಿರಿಸಿ, ಅಶ್ಲೀಲ ನಗ್ನ ದೃಶ್ಯಗಳನ್ನು ತೋರಿಸಿ, ಲೈಂಗಿಕ ದೌರ್ಜನ್ಯ ಎಸಗಿದ್ದ. ಕೊಲೆ ಬೆದರಿಕೆಯನ್ನೂ ಹಾಕಿದ್ದು ತನಿಖೆಯಿಂದ ಗೊತ್ತಾಗಿತ್ತು. ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶೆ ಕೆ.ಎ.ನಾಗಜ್ಯೋತಿ ಅಪರಾಧಿಗೆ ಕಠಿಣ ಸಜೆ ವಿಧಿಸಿದರು. ಸರ್ಕಾರಿ ಅಭಿಯೋಜಕಿ ಪಿ.ಕೆ.ಶಕೀಲಾ ಅಬೂಬಕರ್‌ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT