ಪ್ರಜಾವಾಣಿ ವಾರ್ತೆ
ಶ್ರೀರಂಗಪಟ್ಟಣ: ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಎದುರಿನ ಅಕ್ಷಯ ಹೋಟೆಲ್‌ನಲ್ಲಿ ಬುಧವಾರ ಅಡುಗೆ ಅನಿಲ ಸಿಲಿಂಡರ್‌ನಲ್ಲಿ ಬೆಂಕಿ ಹೊತ್ತುಕೊಂಡು ಆತಂಕ ಉಂಟಾಗಿತ್ತು.
ಸಿಲಿಂಡರ್ ಹೊತ್ತಿಸಿದ ವೇಳೆ ರೆಗ್ಯೂಲೇಟರ್‌ನಲ್ಲಿ ಅನಿಲ ಸೋರಿಕೆಯಾಗಿ ದಿಗ್ಗನೆ ಬೆಂಕಿ ಹೊತ್ತಿಕೊಂಡಿತು. ಹೋಟೆಲ್ ಒಳಗೆ ಮತ್ತು ಹೊರಗೆ ಇದ್ದವರು ದಿಕ್ಕಾಪಾಲಾಗಿ ಓಡಿದ ಅಪಾಯದಿಂದ ಪಾರಾದರು. ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿದರು. ಘಟನೆಯಲ್ಲಿ ಕೆಲವು ಪಾತ್ರೆ, ಪ್ಲಾಸ್ಟಿಕ್ ಪರಿಕರಗಳು, ಕುರ್ಚಿ, ಟೇಬಲ್, ಬಟ್ಟೆ ಹಾಗೂ ದಿನಸಿ ವಸ್ತುಗಳು ಸುಟ್ಟು ಹೋಗಿವೆ.
‘ಹೋಟೆಲ್‌ನಲ್ಲಿ ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಬಳಸಿದ್ದು, ಅನಿಲ ಸೋರಿಕೆಯಿಂದ ಬೆಂಕಿ ಹೊತ್ತಿಕೊಂಡಿದೆ. ಒಂದು ವೇಳೆ ಸಿಲಿಂಡರ್ ಸ್ಫೋಟಿಸಿದ್ದರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು. ಹೋಟೆಲ್‌ಗಳಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ ಮಾತ್ರ ಬಳಸಬೇಕು. ಸಿಲಿಂಡರ್ ಬಳಸುವಾಗ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕು’ ಎಂದು ಅಗ್ನಿಶಾಮಕ ಠಾಣಾಧಿಕಾರಿ ಅಂಬರೀಶ್ ಉಪ್ಪಾರ್ ತಿಳಿಸಿದರು.
ಪ್ರಮುಖ ಅಗ್ನಿಶಾಮಕ ವೆಂಕಟೇಶ್, ಸಿಬ್ಬಂದಿ ಉದಯಕುಮಾರ್ ಸುರಸಾಬ್, ರಮೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.