ADVERTISEMENT

ಡೇರಿ ಪಶು ಆಹಾರ ಬಳಸಿ: ಡಾಲು ರವಿ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 5:56 IST
Last Updated 22 ಸೆಪ್ಟೆಂಬರ್ 2025, 5:56 IST
ಸಂತೇಬಾಚಹಳ್ಳಿ ಹೋಬಳಿಯ ಭಾರತೀಪುರ ಸಂಘದ   ಸಭೆಯಲ್ಲಿ ಮನ್ಮುಲ್ ನಿರ್ದೇಶಕ ಡಾಲು ರವಿ ಮಾತನಾಡಿದರು.
ಸಂತೇಬಾಚಹಳ್ಳಿ ಹೋಬಳಿಯ ಭಾರತೀಪುರ ಸಂಘದ   ಸಭೆಯಲ್ಲಿ ಮನ್ಮುಲ್ ನಿರ್ದೇಶಕ ಡಾಲು ರವಿ ಮಾತನಾಡಿದರು.   

ಸಂತೇಬಾಚಹಳ್ಳಿ: ಹಾಲು ಉತ್ಪಾದಕರು ಮನ್ಮುಲ್  ನೀಡುವ ಪಶು ಆಹಾರವನ್ನೇ ಬಳಸಬೇಕು ಎಂದು ಮನ್ಮುಲ್ ನಿರ್ದೇಶಕ ಡಾಲು ರವಿ ಹೇಳಿದರು.

ಇಲ್ಲಿನ ಭಾರತೀಪುರ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಳ್ಳಿಗಳಲ್ಲಿರುವ ಮಹಿಳೆಯರಿಗೆ ಹೈನುಗಾರಿಕೆ ಪ್ರಮುಖ ಕಸುಬಾಗಿದ್ದು, ಡೇರಿಯಿಂದ ಸಿಗುವ ಸವಲತ್ತುಗಳನ್ನು ಪಡೆಯಬೇಕು.  ರಾಸುಗಳ ಆರೋಗ್ಯ ಸಂರಕ್ಷಿಸಬೇಕು.  ಹಸುಗಳಿಗೆ ಆಹಾರ ನೀಡುವ ಕುರಿತು ತರಬೇತಿ ನೀಡುವ ಚಿಂತನೆ ಸಂಸ್ಥೆಗೆ ಇದೆ ಎಂದರು. ಮಾರ್ಗ ವಿಸ್ತರಣಾಧಿಕಾರಿ ಗುರುರಾಜ್, ಸಂಘದ ಅಧ್ಯಕ್ಷೆ ಸುಶೀಲ, ಉಪಾಧ್ಯಕ್ಷೆ ಗಂಗಮ್ಮ,ಮಂಜಮ್ಮ ಶಾರದಮ್ಮ ಲಕ್ಷ್ಮಮ್ಮ,ಸವಿತಾ,ಸಾವಿತ್ರಿ ಸುಕನ್ಯಾ,ಮಹಾದೇವಮ್ಮ, ಸುಬ್ಬಮ್ಮ, ಶಾರದಮ್ಮ,ಸವಿತಾ, ದೇವಿರಮ್ಮ,ಕಾರ್ಯದರ್ಶಿ ಧನಲಕ್ಷ್ಮೀ, ತಯಮ್ಮ,ಹಾಲು ಉತ್ಪಾದಕರು ಹಾಗೂ ಗ್ರಾಮಸ್ಥರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT