ADVERTISEMENT

ಗಾಂಧಿ ನಿಂತ ನೆಲದಲ್ಲಿ ಪುತ್ಥಳಿ ಸ್ಥಾಪನೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2025, 4:36 IST
Last Updated 3 ಅಕ್ಟೋಬರ್ 2025, 4:36 IST
ಶ್ರೀರಂಗಪಟ್ಟಣಕ್ಕೆ ಮಹಾತ್ಮ ಗಾಂಧೀಜಿ 1927ರ ಜುಲೈ 22ರಂದು ಭೇಟಿ ನೀಡಿ ಭಾಷಣ ಮಾಡಿದ್ದ ಸ್ಥಳದಲ್ಲಿ ಪ್ರಜ್ಞಾವಂತರ ವೇದಿಕೆ ವತಿಯಿಂದ ಗುರುವಾರ ಗಾಂಧಿ ಜಯಂತಿಯನ್ನು ಆಚರಿಸಲಾಯಿತು
ಶ್ರೀರಂಗಪಟ್ಟಣಕ್ಕೆ ಮಹಾತ್ಮ ಗಾಂಧೀಜಿ 1927ರ ಜುಲೈ 22ರಂದು ಭೇಟಿ ನೀಡಿ ಭಾಷಣ ಮಾಡಿದ್ದ ಸ್ಥಳದಲ್ಲಿ ಪ್ರಜ್ಞಾವಂತರ ವೇದಿಕೆ ವತಿಯಿಂದ ಗುರುವಾರ ಗಾಂಧಿ ಜಯಂತಿಯನ್ನು ಆಚರಿಸಲಾಯಿತು   

ಶ್ರೀರಂಗಪಟ್ಟಣ: ‘ಮಹಾತ್ಮ ಗಾಂಧಿ ಅವರು 1927ರ ಜುಲೈ 22ರಂದು ಪಟ್ಟಣದಲ್ಲಿ ಭಾಷಣ ಮಾಡಿದ್ದು, ಈ ಸ್ಥಳದಲ್ಲಿ ಗಾಂಧೀಜಿ ಅವರ ಪುತ್ಥಳಿಯನ್ನು ಸ್ಥಾಪಿಸಬೇಕು’ ಎಂದು ಪ್ರಜ್ಞಾವಂತರ ವೇದಿಕೆ ಸಂಚಾಲಕ ಹಾಗೂ ವಕೀಲ ಸಿ.ಎಸ್. ವೆಂಕಟೇಶ್ ಆಗ್ರಹಿಸಿದರು.

ಪಟ್ಟಣದ ತಾಲ್ಲೂಕು ಕಚೇರಿ ಮುಂದೆ, ಗಾಂಧೀಜಿ ಭಾಷಣ ಮಾಡಿದ ಸ್ಥಳದಲ್ಲಿ ಪ್ರಜ್ಞಾವಂತರ ವೇದಿಕೆ ಗುರುವಾರ ಏರ್ಪಡಿಸಿದ್ದ ಗಾಂಧಿ ಜಯಂತಿಯಲ್ಲಿ ಅವರು ಮಾತನಾಡಿದರು.

‘ಸ್ವಾತಂತ್ರ್ಯ ಚಳವಳಿ ತೀವ್ರಗೊಳ್ಳುತ್ತಿದ್ದ ಸಂದರ್ಭದಲ್ಲಿ ಜನ ಜಾಗೃತಿ ಮೂಡಿಸಲು ಗಾಂಧೀಜಿ ಮೈಸೂರು ಪ್ರಾಂತ್ಯಕ್ಕೆ ಬಂದಿದ್ದರು. ಶ್ರೀರಂಗಪಟ್ಟಣ ಮತ್ತು ಎಡತೊರೆಗೂ ಭೇಟಿ ನೀಡಿದ್ದರು. ಸ್ಥಳೀಯ ಮುಖಂಡರ ಕೋರಿಕೆ ಮೇರೆಗೆ ಪಟ್ಟಣಕ್ಕೆ ಬಂದಿದ್ದ ಅವರು ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಕರೆ ನೀಡಿದ್ದರು. ಅವರು ಮಾತನಾಡಿದ ಸ್ಥಳದಲ್ಲಿ ಸ್ಮಾರಕ ನಿರ್ಮಿಸಿ ಫಲಕ ಹಾಕಬೇಕು’ ಎಂದು ಅವರು ಒತ್ತಾಯಿಸಿದರು.

ADVERTISEMENT

ಸಮರ್ಪಣಾ ಟ್ರಸ್ಟ್ ಅಧ್ಯಕ್ಷ ಕೆ.ಎಸ್‌. ಜಯಶಂಕರ್‌ ಮಾತನಾಡಿ, ‘1948ರ ಫೆ.12ರಂದು ಮಹಾತ್ಮ ಗಾಂಧೀಜಿ ಅವರ ಚಿತಾ ಭಸ್ಮವನ್ನು ಇಲ್ಲಿನ ಪಶ್ಚಿಮ ವಾಹಿನಿ ಬಳಿ ಕಾವೇರಿ ನದಿಯಲ್ಲಿ ವಿಸರ್ಜಿಸಲಾಗಿದೆ. ಅಂದಿನ ಮುಖ್ಯಮಂತ್ರಿ ಕೆ.ಸಿ. ರೆಡ್ಡಿ ನೇತೃತ್ವದಲ್ಲಿ ಚಿತಾಭಸ್ಮ ವಿಸರ್ಜನೆ ಕಾರ್ಯ ನಡೆದಿದೆ. ಅದರ ಗೌರವಾರ್ಥ ಪಟ್ಟಣದಲ್ಲಿ ಸರ್ವೋದಯ ಮೇಳ ನಡೆಯುತ್ತಿದೆ’ ಎಂದರು. ವಕೀಲರಾದ ಎನ್‌.ಎಂ. ಮಹದೇವು, ಮನು, ಕೆ.ವಿ. ಸುಜಾತ ಅರಸ್‌, ಶ್ರೀನಿವಾಸ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.