ADVERTISEMENT

ಹಲಗೂರು: ನೋಟ್ ಪುಸ್ತಕ ಮತ್ತು ಕಲಿಕಾ ಉಪಕರಣ ವಿತರಣೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2023, 14:19 IST
Last Updated 28 ಜುಲೈ 2023, 14:19 IST
ಹಲಗೂರಿನ ಕೆ.ಪಿ.ಎಸ್ ಶಾಲೆ ಆವರಣದಲ್ಲಿ ದಾನಿಗಳಿಂದ ಸಂಗ್ರಹಿಸಿದ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು. ಈ ವೇಳೆ ಸುಂದ್ರಪ್ಪ, ಎ.ಎಸ್.ದೇವರಾಜು, ತಿಮ್ಮಪ್ಪ, ಡಾ.ಅರುಣ್ ಕುಮಾರ್, ಡಾ.ನಾಗೇಶ್, ಮಲ್ಲಿಕಾರ್ಜುನ, ಶಿವಣ್ಣ, ಅಭಿಜಿತ್, ಕೃಷ್ಣಪ್ಪ ಇದ್ದರು

ಹಲಗೂರು: ಇಲ್ಲಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ದಾನಿಗಳಿಂದ ಸಂಗ್ರಹಿಸಿದ ನೋಟ್ ಪುಸ್ತಕ ಸೇರಿದಂತೆ ಕಲಿಕಾ ಸಾಮಾಗ್ರಿಗಳನ್ನು  ಮಕ್ಕಳಿಗೆ ವಿತರಣೆ ಮಾಡಲಾಯಿತು.

ಅಯೋಜಕ ಲಿಂಗಪಟ್ಟಣ ಸುಂದರಪ್ಪ ಮಾತನಾಡಿ, ‘ವಿದ್ಯಾರ್ಥಿ ಜೀವನವು ಬಹಳ ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ. ಮಕ್ಕಳು ತಮ್ಮಲ್ಲಿರುವ ಅನಾಥ ಭಾವನೆಯನ್ನು ಮನಸ್ಸಿನಿಂದ ತೆಗದು ಹಾಕಿ, ಶಿಕ್ಷಣ ಕಲಿಕೆಯ ಕಡೆಗೆ ಹೆಚ್ಚು ಒತ್ತು ಕೊಡಬೇಕು. ಸತತ ಅಭ್ಯಾಸ ಮತ್ತು ಪರಿಶ್ರಮದಿಂದ ಛಲ ಬಿಡದೆ ವಿದ್ಯಾಭ್ಯಾಸ ಮಾಡುವ ಮೂಲಕ ಭವಿಷ್ಯದಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಬೇಕು’ ಎಂದು ಕರೆ ನೀಡಿದರು.

ನಿವೃತ್ತ ಶಿಕ್ಷಕ ಎ.ಎಸ್.ದೇವರಾಜು, ತಿಮ್ಮಪ್ಪ, ಡಾ.ಅರುಣ್ ಕುಮಾರ್, ಡಾ.ನಾಗೇಶ್, ಮಲ್ಲಿಕಾರ್ಜುನ, ಶಿವಣ್ಣ, ಅಭಿಜಿತ್, ಕೃಷ್ಣಪ್ಪ ಮಂಗಳಮ್ಮ, ಬೋರೇಗೌಡ, ಸುರೇಶ್, ಹಿಸ್ರತ್ ಬೇಗಂ, ಕುಳ್ಳಯ್ಯ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.