ADVERTISEMENT

ಭಾರತೀನಗರ: ಪೌರಕಾರ್ಮಿಕರಿಗೆ ಲಯನ್ಸ್ ಸಂಸ್ಥೆಯಿಂದ ಸಮವಸ್ತ್ರ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2024, 13:54 IST
Last Updated 16 ಸೆಪ್ಟೆಂಬರ್ 2024, 13:54 IST
ಭಾರತೀನಗರ ಗ್ರಾಮ ಪಂಚಾಯಿತಿ ಪೌರಕಾರ್ಮಿಕರಿಗೆ ಲಯನ್ಸ್ ಕ್ಲಬ್ ಆಫ್ ಮದ್ದೂರು ಕದಂಬ ವತಿಯಿಂದ ಸಮವಸ್ತ್ರ ವಿತರಿಸಲಾಯಿತು
ಭಾರತೀನಗರ ಗ್ರಾಮ ಪಂಚಾಯಿತಿ ಪೌರಕಾರ್ಮಿಕರಿಗೆ ಲಯನ್ಸ್ ಕ್ಲಬ್ ಆಫ್ ಮದ್ದೂರು ಕದಂಬ ವತಿಯಿಂದ ಸಮವಸ್ತ್ರ ವಿತರಿಸಲಾಯಿತು   

ಭಾರತೀನಗರ: ಇಲ್ಲಿನ ಗ್ರಾಮ ಪಂಚಾಯಿತಿ ಪೌರಕಾರ್ಮಿಕರಿಗೆ ಲಯನ್ಸ್‌ ಕ್ಲಬ್‌ ಆಫ್‌ ಮದ್ದೂರು ಕದಂಬ ವತಿಯಿಂದ ಸಮವಸ್ತ್ರ ವಿತರಿಸಲಾಯಿತು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 10 ಪೌರಕಾರ್ಮಿಕರಿಗೆ ಸಂಸ್ಥೆಯ ಮೆಳ್ಳಹಳ್ಳಿ ಶ್ರೀನಿವಾಸ್‌ ಸಾಂಕೇತಿಕ ಸಮವಸ್ತ್ರ ವಿತರಿಸಿದರು.

ಸಂಸ್ಥೆಯ ಖಜಾಂಚಿ ಎಸ್‌.ಬಿ.ನಾಗರಾಜು ಮಾತನಾಡಿ, ‘ಪೌರಕಾರ್ಮಿಕರು ಮುಂಜಾನೆಯೇ ಎದ್ದು ನಗರಗಳ, ಗ್ರಾಮಗಳ ಸ್ವಚ್ಚತೆಯ ಕಾರ್ಯ ಮಾಡುತ್ತಾರೆ. ಪೌರಕಾರ್ಮಿಕರು ಯಾವುದೇ ರೀತಿಯ ಅಪೇಕ್ಷೆಗಳಿಲ್ಲದೆ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಸ್ವಚ್ಛತೆ  ನಡೆಸುತ್ತಿದ್ದಾರೆ. ಇವರ ನೆರವಾಗುವುದು ಒಂದು ಸೌಭಾಗ್ಯ. ಆ ಹಿನ್ನೆಲೆಯಲ್ಲಿ ಎಲ್ಲಾ ಪೌರಕಾರ್ಮಿಕರಿಗೆ ಶ್ರೀನಿವಾಸ್‌ ಸಮವಸ್ತ್ರ  ನೀಡಿರುವುದು ಮೆಚ್ಚುವ ಕಾರ್ಯ ಎಂದು ಹೇಳಿದರು.

ADVERTISEMENT

ಮದ್ದೂರು ಕದಂಬ ಲಯಯನ್ಸ್‌ ಅಧ್ಯಕ್ಷ ಕೆಂಗಲ್ ಗೌಡ, ಸಿದ್ದೇಗೌಡ, ಮೆಲ್ಲಹಳ್ಳಿ ಶ್ರೀನಿವಾಸ್, ಕೇಬಲ್ ಮಹೇಶ್, ದಿನೇಶ್, ಕೆ ಶಿವಕುಮಾರ್, ಲಿಂಗನದೊಡ್ಡಿ ನಾಗರಾಜು, ಪೌರಕಾರ್ಮಿಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.