ಮಂಡ್ಯ: ಜಿಲ್ಲೆಯಲ್ಲಿ ವಿವಿಧೆಡೆ ವರನಟ ರಾಜ್‌ಕುಮಾರ್ ಅವರ ಜಯಂತಿಯನ್ನು ಅವರ ಅಭಿಮಾನಿಗಳು ಕೆಲವು ಪೌರ ಕಾರ್ಮಿಕರಿಗೆ ಫುಡ್‌ಕಿಟ್ ವಿತರಣೆ ಮಾಡುವುದು ಸೇರಿದಂತೆ ಅನ್ನದಾಸೋಹ ನಡೆಸಿ ಗುರುವಾರ ವಿಜೃಂಭಣೆಯಿಂದ ಆಚರಿಸಿದರು.
ಪೇಟೆ ಬೀದಿ: ನಗರದ ನಗರದ ಪೇಟೆಬೀದಿಯಲ್ಲಿ ನಡೆದ ಜನ್ಮದಿನದ ಸಮಾರಂಭದಲ್ಲಿ ನಗರಸಭೆ ಅಧ್ಯಕ್ಷ ಎಂ.ವಿ. ಪ್ರಕಾಶ್(ನಾಗೇಶ್) ಮಾತನಾಡಿ, ‘ಕನ್ನಡ ನಾಡಿನಲ್ಲಿ ಹುಟ್ಟಿ ಬೆಳೆದು ಕನ್ನಡ ಭಾಷೆಯನ್ನು ವಿಶ್ವಮಟ್ಟದಲ್ಲಿ ಬೆಳೆಯುವಂತೆ ಮಾಡಿದ ಕೀರ್ತಿ ರಾಜಕುಮಾರ್ ಅವರದ್ದಾಗಿದೆ. ಅವರು ಸದಾ ಅಭಿಮಾನಿಗಳಲ್ಲಿ ಜೀವಂತರಾಗಿರುತ್ತಾರೆ’ ಎಂದರು.
ಅಭಿಮಾನಿಗಳಾದ ನಾಗರಾಜು, ಶ್ರೀಧರ, ಗೌತಮ್, ನಿರಂಜನ್ ಇದ್ದರು.
ಸಿಲ್ವರ್ ಜ್ಯೂಬಿಲ್ ಪಾರ್ಕ್: ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಲ್ಲಿ ರಾಜಕುಮಾರ್ ಅಭಿಮಾನಿಗಳ ಸಂಘದಿಂದ ಅವರ ಜಯಂತಿ ಆಚರಿಸಲಾಯಿತು. ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಸಿ. ರವೀಂದ್ರ ಮಾತನಾಡಿ, ‘ರಾಜ್ ಅವರ 97ನೇ ವರ್ಷದ ಜಯಂತಿ ಆಚರಿಸುತ್ತಿದ್ದೇವೆ, ಕೇಂದ್ರ ಸರ್ಕಾರವು 100ನೇ ವರ್ಷದ ರಾಜಕುಮಾರ್ ಜಯಂತಿಗಾದರೂ ‘ಭಾರತ ರತ್ನ’ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ನಂತರ ಸಾರ್ವಜನಿಕರಿಗೆ ಅನ್ನದಾಸೋಹ ಏರ್ಪಡಿಲಾಗಿತ್ತು. ಕಾರ್ಯಕ್ರಮದಲ್ಲಿ ಅಭಿಮಾನಿಗಳಾದ ಪ್ರವೀಣ್‌ಕುಮಾರ್, ಸುರೇಶ್‌ಬಾಬು ಭಾಗವಹಿಸಿದ್ದರು.
ಫುಡ್‌ಕಿಟ್ ವಿತರಣೆ: ನಗರದ ಸ್ವರ್ಣಸಂದ್ರ ಬಡಾವಣೆಯಲ್ಲಿ ಅಖಿಲ ಕರ್ನಾಟಕ ರಾಜ್‌ಕುಮಾರ್ ಅಭಿಮಾನಿಗಳ ಸಂಘದಿಂದ ಪೌರಕಾರ್ಮಿಕರಿಗೆ ಫುಡ್‌ಕಿಟ್ ವಿತರಣೆ ಮಾಡಲಾಯಿತು. ಸಂಘದ ಅಧ್ಯಕ್ಷ ನಾಗರಾಜ್ ಅವರು ಚಾಲನೆ ನೀಡಿದರು. ಅಭಿಮಾನಿಗಳಾದ ಬಸವೇಗೌಡ, ಸಿದ್ದಪ್ಪ, ರಘು, ಪಾಪಣ್ಣ, ತಿಲಕ್, ಬಸವರಾಜ್, ಚಿರಂಜೀವಿ, ರಾಜಣ್ಣ ಭಾಗವಹಿಸಿದ್ದರು.
ವಿವಿಧೆಡೆ ರಾಜಕುಮಾರ್ ಜನ್ಮದಿನ ಕನ್ನಡವನ್ನು ವಿಶ್ವಮಟ್ಟದಲ್ಲಿ ಬೆಳೆಸಿದ ವರನಟ 100ನೇ ಜನ್ಮದಿನಕ್ಕೆ ಘೋಷಣೆಯಾಗಲಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.