ಹಲಗೂರು: ಇಲ್ಲಿನ ಕೆಂಪೇಗೌಡ ಬಡಾವಣೆಯ ನಿವಾಸಿ ಕಮಲಮ್ಮ ಎಂಬುವರ ಗಮನವನ್ನು ಬೇರೆಡೆಗೆ ಸೆಳೆದ ಅಪರಿಚಿತ ವ್ಯಕ್ತಿ ₹12 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ.
ಗುರುವಾರ ಸಂಜೆ ತಮ್ಮ ಮನೆಯ ಜಗಲಿಯ ಮೇಲೆ ಕುಳಿತಿದ್ದಾಗ ಆ್ಯಕ್ಟಿವಾ ಹೊಂಡಾ ಸ್ಕೂಟರ್‌ನಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ಮನೆಯ ವಿಳಾಸ ಕೇಳುವ ನೆಪದಲ್ಲಿ ಕಮಲಮ್ಮ ಅವರನ್ನು ಪರಿಚಯಿಸಿಕೊಂಡಿದ್ದಾರೆ.
ಕಮಲಮ್ಮ ಧರಿಸಿದ್ದ ಚಿನ್ನಾಭರಣಗಳನ್ನು ಗಮನಿಸಿದ ವಂಚಕ ‘ಏನಮ್ಮ ಇಷ್ಟೊಂದು ಚಿನ್ನ ಧರಿಸಿದ್ದರಿ, ತುಂಬಾ ಸ್ಥಿತಿವಂತರಿದ್ದೀರಾ ಎಂದು ಆತ್ಮೀಯತೆಯಿಂದ ಮಾತನಾಡಿಸಿದ್ದಾನೆ. ನಂತರ ತಾನೂ ತಂದಿದ್ದ ಸಿಹಿ ತಿಂಡಿಯನ್ನು ಕಮಲಮ್ಮ ಅವರಿಗೆ ನೀಡಿದ್ದು, ತಿಂಡಿ ತಿಂದ ತಕ್ಷಣ ಕಮಲಮ್ಮ ಪ್ರಜ್ಞೆ ತಪ್ಪಿದ್ದಾಳೆ. ಕೊರಳಲ್ಲಿದ್ದ ಸರ, ಕೈಬಳೆ, ಬೆರಳಲ್ಲಿದ್ದ ಉಂಗುರ ಸೇರಿದಂತೆ 126 ಗ್ರಾಂ ತೂಕದ ಚಿನ್ನಾಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದಾನೆ.
ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.