
ಪ್ರಜಾವಾಣಿ ವಾರ್ತೆ
ಬೆಳಕವಾಡಿ: ಸಮೀಪದ ಶಿವನಸಮುದ್ರ (ಬ್ಲಫ್) ಗ್ರಾಮದ ಗಗನ ಚುಕ್ಕಿ ಜಲಪಾತದ ಬಳಿ ಮೆಟ್ಟಿಲುಗಳ ಬದಿಯಲ್ಲಿ ಅಳವಡಿಸಿದ್ದ ತಡೆಗೋಡೆಯ ಕಂಬಿಗಳನ್ನು ಕಾಡಾನೆ ಭಾನುವಾರ ರಾತ್ರಿ ದಾಳಿ ಮಾಡಿ ಮುರಿದು ಹಾಕಿದೆ.
ಪ್ರವಾಸೋದ್ಯಮ ಇಲಾಖೆ ವತಿಯಿಂದ ಗಗನ ಚುಕ್ಕಿ ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಯಾವುದೇ ಅಪಾಯವಾಗದಂತೆ ಅವರ ಸುರಕ್ಷತೆಗಾಗಿ ಮೆಟ್ಟಿಲುಗಳ ಬದಿಯಲ್ಲಿ ಅಳವಡಿಸಿದ್ದ ತಡೆಗೋಡೆಯ ಕಂಬಿಗಳನ್ನು ಕಾಡಾನೆ ಮುರಿದು ಹಾಕಿದೆ ಎಂದು ಸ್ಥಳೀಯ ವ್ಯಾಪರಿಯೊಬ್ಬರು ತಿಳಿಸಿದ್ದಾರೆ.