ADVERTISEMENT

ನಾಗಮಂಗಲ: ಒತ್ತುವರಿ ಜಾಗ ತೆರವು

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2025, 2:48 IST
Last Updated 1 ಆಗಸ್ಟ್ 2025, 2:48 IST
ನಾಗಮಂಗಲ ಪಟ್ಟಣದ ಕೋಟೆಬೆಟ್ಟ ರಸ್ತೆಯಲ್ಲಿ ಅಂಗಡಿ ಮುಂಭಾಗ ಅಕ್ರಮವಾಗಿ ಹೆಚ್ಚುವರಿ ಜಾಗವನ್ನು ಒತ್ತುವರಿ ಮಾಡಿರುವುದನ್ನು ಪುರಸಭೆಯ ಅಧಿಕಾರಿಗಳು ತೆರವುಗೊಳಿಸಿದರು.
ನಾಗಮಂಗಲ ಪಟ್ಟಣದ ಕೋಟೆಬೆಟ್ಟ ರಸ್ತೆಯಲ್ಲಿ ಅಂಗಡಿ ಮುಂಭಾಗ ಅಕ್ರಮವಾಗಿ ಹೆಚ್ಚುವರಿ ಜಾಗವನ್ನು ಒತ್ತುವರಿ ಮಾಡಿರುವುದನ್ನು ಪುರಸಭೆಯ ಅಧಿಕಾರಿಗಳು ತೆರವುಗೊಳಿಸಿದರು.   

ನಾಗಮಂಗಲ: ಪಾದಚಾರಿಗಳ ಸಂಚಾರಕ್ಕೆ ಅಡಚಣೆಯಾಗುತ್ತಿದ್ದ ನಿಟ್ಟಿನಲ್ಲಿ ಪುರಸಭೆ ಅಧಿಕಾರಿಗಳು ಅಂಗಡಿಗಳ ಮುಂದೆ ಒತ್ತುವರಿ ಮಾಡಿಕೊಂಡಿರುವ  ಜಾಗವನ್ನು ತೆರವುಗೊಳಿಸಿದರು. 

ಪಟ್ಟಣ ವ್ಯಾಪ್ತಿಯ ವಾಣಿಜ್ಯ ಅಂಗಡಿ ಮಳಿಗೆಗಳ ಮುಂಭಾಗ ಹೆಚ್ಚುವರಿ ಜಾಗ ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡಿಕೊಂಡಿದ್ದ ಮಾಲೀಕರಿಗೆ ಈಗಾಗಲೇ ಹಲವು ಬಾರಿ ಪುರಸಭೆಯಿಂದ ತೆರವು ಮಾಡುವಂತೆ ನೋಟಿಸ್ ಜಾರಿ ಮಾಡಿದ್ದರು. ಆದರೂ ಜಾಗ ತೆರವು ಮಾಡಿರಲಿಲ್ಲ.

ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್ ನೇತೃತ್ವದಲ್ಲಿ ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಟಿ.ಬಿ. ಬಡಾವಣೆಯ ಕೋಟೆಬೆಟ್ಟ ರಸ್ತೆಯಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಮಳಿಗೆಗಳ ಮುಂಭಾಗದ ಒತ್ತುವರಿ ಜಾಗವನ್ನು ತೆರವುಗೊಳಿಸಿದರು.

ADVERTISEMENT
ನಾಗಮಂಗಲ ಪಟ್ಟಣದ ಕೋಟೆಬೆಟ್ಟ ರಸ್ತೆಯಲ್ಲಿ ಅಂಗಡಿ ಮುಂಭಾಗ ಅಕ್ರಮವಾಗಿ ಹೆಚ್ಚುವರಿ ಜಾಗವನ್ನು ಒತ್ತುವರಿ ಮಾಡಿರುವುದನ್ನು ಪುರಸಭೆಯ ಅಧಿಕಾರಿಗಳು ತೆರವುಗೊಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.