ADVERTISEMENT

ಉರಿಗೌಡ, ದೊಡ್ಡನಂಜೇಗೌಡರ ಲಾವಣಿ ಪತ್ತೆ?

ಹ.ಕ.ರಾಜೇಗೌಡರು ಸಂಗ್ರಹಿಸಿದ್ದಾರೆ ಎನ್ನಲಾದ ಲಾವಣಿಗೆ ಧ್ವನಿಯಾದ ಕ್ರಾಂತಿ ಮಂಜು

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2023, 22:03 IST
Last Updated 17 ಮಾರ್ಚ್ 2023, 22:03 IST
ಕ್ರಾಂತಿ ಮಂಜು
ಕ್ರಾಂತಿ ಮಂಜು   

ಮಂಡ್ಯ: ‘ಟಿಪ್ಪು ಸುಲ್ತಾನ್‌ನನ್ನು ಉರಿಗೌಡ ಹಾಗೂ ದೊಡ್ಡನಂಜೇಗೌಡ ಎಂಬುವವರು ಕೊಂದರೆಂಬುದಕ್ಕೆ ಸಾಕ್ಷಿ’ ಎನ್ನಲಾದ ಲಾವಣಿಯನ್ನು ನಗರಸಭೆ ನಾಮನಿರ್ದೇಶಿತ ಸದಸ್ಯ ಕ್ರಾಂತಿ ಮಂಜು ಲಾವಣಿ ಹಾಡಿ ಚರ್ಚೆ ಹುಟ್ಟುಹಾಕಿದ್ದಾರೆ.

‘ಸಂಶೋಧಕ ಹ.ಕ.ರಾಜೇಗೌಡರು ತಮ್ಮ ಲೇಖನವೊಂದರಲ್ಲಿ ಲಾವಣಿಯನ್ನು ಪ್ರಸ್ತಾಪಿಸಿದ್ದು, ಟಿಪ್ಪುವನ್ನು ಉರಿಗೌಡ, ದೊಡ್ಡನಂಜೇಗೌಡರೇ ಕೊಂದಿದ್ದಾರೆಂಬುದನ್ನು ಪುಷ್ಟೀಕರಿಸುವ ದಾಖಲೆಗಳು ಸಿಕ್ಕಿವೆ’ ಎಂದು ಮಂಜು ತಮ್ಮ ವಿಡಿಯೊದಲ್ಲಿ ತಿಳಿಸಿದ್ದಾರೆ.

‘ಹೇಳುತ್ತೇವೆ ಹೇಳುತ್ತೇವೆ ಗೌಡರ ಕತೆಯ ಹೇಳುತ್ತೇವೆ, ಶೌರ್ಯದ ಕತೆಯ ಹೇಳುತ್ತೇವೆ, ವೀರರ ಕತೆಯ ಹೇಳುತ್ತೇವೆ, ನಾಡದ್ರೋಹಿಯನ್ನು ಕೊಂದ ಗೌಡರ ಕತೆಯ ಹೇಳುತ್ತೇವೆ’ ಎಂದು ಲಾವಣಿ ಆರಂಭವಾಗುತ್ತದೆ. ‘ಕ್ಯಾತನಹಳ್ಳಿ ಉರಿಗೌಡ, ಹನುಮ್ನಳ್ಳಿ ದೊಡ್ಡ ನಂಜೇಗೌಡ ಸೇರಿದಂತೆ ಹತ್ತಾರು ಗೌಡರು ಸುಲ್ತಾನನ್ನು ಅಟ್ಟಾಡಿಸಿಕೊಂಡು ಕೊಂದರು. ಮೈಸೂರು ರಾಣಿ ಲಕ್ಷ್ಮಮ್ಮಣ್ಣಿಗೆ ಮತ್ತೆ ರಾಜ್ಯ ತಂದು ಕೊಟ್ಟರು’ ಎಂದು ಪ್ರಸ್ತಾಪವಾಗುತ್ತದೆ.

ADVERTISEMENT

‘2015ರಲ್ಲಿ ಪ್ರಜ್ಞಾಭಾರತ ಬ್ಲಾಗ್‌ನಲ್ಲಿ ಪ್ರಕಟವಾಗಿದ್ದ ನನ್ನ ಲೇಖನವನ್ನು ಕೆಲವರು ಹೈಜಾಕ್‌ ಮಾಡಿದರು. ನಾನು ಬಿಜೆಪಿ ಕಾರ್ಯಕರ್ತನಾದರೂ ಈ ವಿಚಾರದಲ್ಲಿ ರಾಜಕಾರಣ ಮಾಡುವುದಿಲ್ಲ. ಹುಡುಕಾಟ ಮುಂದುವರಿಸುತ್ತೇನೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು. ಅವರ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.