ADVERTISEMENT

ಮಳವಳ್ಳಿ | ಸಾಲಬಾಧೆಗೆ ಹೆದರಿ ರೈತ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2025, 12:59 IST
Last Updated 29 ಜನವರಿ 2025, 12:59 IST
 ಸಂಜಯ್
 ಸಂಜಯ್   

ಮಳವಳ್ಳಿ(ಮಂಡ್ಯ): ಕಿರುಗಾವಲು ಹೋಬಳಿಯ ದುಗ್ಗನಹಳ್ಳಿ ಗ್ರಾಮದಲ್ಲಿ ವೆಂಕಟಶೆಟ್ಟಿ ಎಂಬುವವರ ಪುತ್ರ ರೈತ ಸಂಜಯ್(34) ನೇಣು ಬಿಗಿದು ಕೊಂಡು ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲದ ಹೊರೆ ಭರಿಸಲಾರದೆ ಕೃತ್ಯ ನಡೆಸಿರಬಹುದು ಎಂಬ ಮಾಹಿತಿ ಇದೆ.

30 ಗುಂಟೆ ಜಮೀನು ಹೊಂದಿದ್ದ ಸಂಜಯ್ ಬೇರೆಯವರ ಜಮೀನನ್ನು ಗುತ್ತಿಗೆಗೆ ಪಡೆದು ವ್ಯವಸಾಯ ಮಾಡುತ್ತಿದ್ದರು ಎನ್ನಲಾಗಿದೆ. ಇತ್ತೀಚೆಗೆ ಎರಡು ಬೋರ್‌ವೆಲ್ ಕೊರೆಯಿಸಿ ನೀರು ಬರದ್ದರಿಂದ ಮನನೊಂದಿದ್ದರು. ವ್ಯವಸಾಯಕ್ಕಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ,  ಮೈಕ್ರೊಫೈನಾನ್ಸ್, ಕೈಸಾಲ ಸೇರಿದಂತೆ ಹಲವೆಡೆ ₹10 ಲಕ್ಷಕ್ಕೂ ಅಧಿಕ ಮೊತ್ತದ ಸಾಲ ಮಾಡಿದ್ದರು.‌

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.