
ಪ್ರಜಾವಾಣಿ ವಾರ್ತೆ
ನ್ಯಾಯಾಲಯ
ಪಾಂಡವಪುರ: ಇಲ್ಲಿನ ಆರೋಗ್ಯ ಇಲಾಖೆಯ ವಸತಿ ಗೃಹದಲ್ಲಿ ಈಚೆಗೆ ನಡೆದಿದ್ದ ಹೆಣ್ಣು ಭ್ರೂಣ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ 9 ಆರೋಪಿಗಳ ಜಾಮೀನು ಅರ್ಜಿಯನ್ನು ಶ್ರೀರಂಗಪಟ್ಟಣದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಬುಧವಾರ ರದ್ದುಪಡಿಸಿದೆ.
ಆರೋಪಿಗಳಾದ ಸಿ.ಜಿ.ಗಿರಿಜಾಂಭ, ಶಿವಲಿಂಗ ನಾಯಕ್, ನವೀನ್ ಕುಮಾರ್, ಎಂ.ಕಿರಣ್ ಕುಮಾರ್, ಎಚ್.ಅಖಿಲೇಶ್, ಶೃತಿ, ಸತ್ಯಮ್ಮ, ಕುಮಾರ್, ಎಂ.ಆನಂದ ಅವರು ಜಾಮೀನು ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಟಿ.ಗೋಪಾಲಕೃಷ್ಣ ರೈ ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು. ಸರ್ಕಾರಿ ಅಭಿಯೋಜಕಿ ಎಂ.ಕೆ.ಪ್ರಫುಲ್ಲಾ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.