ADVERTISEMENT

ಗಾಂಧಿ ತತ್ವಕ್ಕೆ ಗುಂಡೊಡೆದಿದ್ದು ಕಾಂಗ್ರೆಸ್: ಸಿ.ಟಿ.ರವಿ ಆರೋಪ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 6:46 IST
Last Updated 29 ಜನವರಿ 2026, 6:46 IST
ಮಂಡ್ಯ ನಗರದ ಸ್ವರ್ಣಸಂದ್ರ ಬಡಾವಣೆಯಲ್ಲಿ ಬುಧವಾರ ಜಿಲ್ಲಾ ಬಿಜೆಪಿ ಮುಖಂಡ ಎಚ್.ಆರ್.ಅರವಿಂದ್ ಮತ್ತು ಜಿಲ್ಲಾ ಬಿಜೆಪಿ ಪದಾಧಿಕಾರಿಗಳು ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಅವರನ್ನು ಸನ್ಮಾನಿಸಿದರು
ಮಂಡ್ಯ ನಗರದ ಸ್ವರ್ಣಸಂದ್ರ ಬಡಾವಣೆಯಲ್ಲಿ ಬುಧವಾರ ಜಿಲ್ಲಾ ಬಿಜೆಪಿ ಮುಖಂಡ ಎಚ್.ಆರ್.ಅರವಿಂದ್ ಮತ್ತು ಜಿಲ್ಲಾ ಬಿಜೆಪಿ ಪದಾಧಿಕಾರಿಗಳು ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಅವರನ್ನು ಸನ್ಮಾನಿಸಿದರು   

ಮಂಡ್ಯ: ಭ್ರಷ್ಟಾಚಾರ, ಹಗರಣಗಳು ಹಲವಾರು ಕಾಂಗ್ರೆಸ್‌ ಸಚಿವರಿಗೆ ಸುತ್ತಿಕೊಳ್ಳುತ್ತಿವೆ. ಕಾಂಗ್ರೆಸ್‌ ಪಕ್ಷದ ರಾಜ್ಯ ರಾಜಕಾರಣ ಅಯೋಮಯ ಸ್ಥಿತಿಯಲ್ಲಿದೆ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಆರೋಪ ಮಾಡಿದರು. 

ಮೈಸೂರಿನಿಂದ ಬೆಂಗಳೂರಿಗೆ ಹೆದ್ದಾರಿ ಮಾರ್ಗವಾಗಿ ತೆರಳುತ್ತಿದ್ದಾಗ ನಗರದ ಸ್ವರ್ಣಸಂದ್ರ ಬಡಾವಣೆಯಲ್ಲಿ ಜಿಲ್ಲಾ ಬಿಜೆಪಿ ಮುಖಂಡ ಎಚ್.ಆರ್. ಅರವಿಂದ್ ಮತ್ತು ಜಿಲ್ಲಾ ಬಿಜೆಪಿ ಪದಾಧಿಕಾರಿಗಳಿಂದ ಬುಧವಾರ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಒಳ್ಳೆಯ ಕಾರಣಕ್ಕೆ ಈ ಸರ್ಕಾರ ಸುದ್ದಿಯಾಗುತ್ತಿಲ್ಲ. ಕೆಟ್ಟ ರಾಜಕಾರಣದಿಂದ ಪ್ರಚಾರದಲ್ಲಿದೆ. ರಾಜ್ಯದಲ್ಲಿ ನಿತ್ಯ ನಡೆಯುತ್ತಿರುವ ಅತ್ಯಾಚಾರ, ಡ್ರಗ್ಸ್, ದರೋಡೆ ಇವು ಒಳ್ಳೆಯ ಕಾರಣವೇನು? ರೈತರ ಆತ್ಮಹತ್ಯೆ, ಪ್ರಾಮಾಣಿಕ ಅಧಿಕಾರಿಗಳಿಗೆ ಕಿರುಕುಳ ಮುಂತಾದ ರೀತಿಯಲ್ಲಿ ಕೆಟ್ಟ ಕಾರಣಕ್ಕೆ ಸುದ್ದಿಯಾಗುತ್ತಿದೆ ಎಂದು ದೂರಿದರು. 

ADVERTISEMENT

‘ಗಾಂಧಿ ದೇಹಕ್ಕೆ ಗುಂಡೊಡೆದಿದ್ದು ಗೋಡ್ಸೆ, ಗಾಂಧಿ ತತ್ವಕ್ಕೆ ಗುಂಡೊಡೆದಿದ್ದು ಕಾಂಗ್ರೆಸ್. ಗಾಂಧಿ ತತ್ವ ಮದ್ಯಪಾನ ನಿಷೇಧ ಆಗಬೇಕು, ಆದರೆ ಇವರು ಕಿರಾಣಿ ಅಂಗಡಿಗಳೆಲ್ಲಾ ಅಕ್ರಮ ಮದ್ಯ ಸಿಗುವಂತೆ ಮಾಡಿದ್ದಾರೆ’ ಎಂದರು.

‘ಗಾಂಧಿ ಸ್ವದೇಶಿಗೆ ಒತ್ತು ಕೊಟ್ಟರೆ, ಇವರ (ಕಾಂಗ್ರೆಸ್‌) ನಾಯಕತ್ವನೇ ವಿದೇಶಿ. ಗಾಂಧಿ ಪ್ರಾಮಾಣಿಕತೆಯ ಪ್ರತಿರೂಪವಾದರೆ ಇವತ್ತಿನ ಕಾಂಗ್ರೆಸ್ ಭ್ರಷ್ಟಾಚಾರದ ಪ್ರತಿರೂಪವಾಗಿ ಬದಲಾಗಿದೆ ಎಂದರು.

ಬಿಜೆಪಿ ಮುಖಂಡ ಎಚ್.ಆರ್. ಅರವಿಂದ್, ಸದಾನಂದ, ಚಂದಗಾಲು ಶಿವಣ್ಣ, ಜಿಲ್ಲಾ ಘಟಕದ ಅಧ್ಯಕ್ಷ ಇಂದ್ರೇಶ್, ವಿವೇಕ್, ಇಂಡುವಾಳು ಸಚ್ಚಿದಾನಂದ, ಕೇಶವ್, ಸಿ.ಟಿ.ಮಂಜುನಾಥ್, ಒಬಿಸಿ ಆನಂದ್, ನಾಗನಂದ, ವೈರಮುಡಿ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.