ADVERTISEMENT

ಬೆಳಕವಾಡಿ: ಕಸದ ರಾಶಿ ವಿಲೇವಾರಿ ಮಾಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 4:44 IST
Last Updated 21 ಆಗಸ್ಟ್ 2025, 4:44 IST
ಬೆಳಕವಾಡಿ ಗ್ರಾಮದ ಮಳವಳ್ಳಿ ರಸ್ತೆಯ ಬದಿಯಲ್ಲಿ ಕಸ ಹಾಗೂ ಮಣ್ಣಿನ ರಾಶಿ
ಬೆಳಕವಾಡಿ ಗ್ರಾಮದ ಮಳವಳ್ಳಿ ರಸ್ತೆಯ ಬದಿಯಲ್ಲಿ ಕಸ ಹಾಗೂ ಮಣ್ಣಿನ ರಾಶಿ   

ಬೆಳಕವಾಡಿ: ಗ್ರಾಮದ ಮಳವಳ್ಳಿ ರಸ್ತೆಯ ಜಂಗಮಯ್ಯನ ಕಟ್ಟೆಯ ಬಳಿ ಕಸದ ರಾಶಿ ಹಾಕಿರುವುದರಿಂದ ದುರ್ವಾಸನೆ ಬೀರುತ್ತಿದ್ದು, ವಾಹನ ಸವಾರರು, ಪಾದಚಾರಿಗಳು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪ್ರತಿನಿತ್ಯ ಬೆಳಿಗ್ಗೆ, ಸಂಜೆ ವಾಯುವಿಹಾರಕ್ಕೆ ಹೋಗುವ ಸಾರ್ವಜನಿಕರು, ಕಾಲೇಜು ವಿದ್ಯಾರ್ಥಿಗಳು ಹಾಗೂ ವಾಹನ ಸವಾರರು ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿ ಜನರು ಪಂಚಾಯಿತಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಹಾಗಾಗಿ ಸಂಬಂಧಪಟ್ಟ ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿ, ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ತಕ್ಷಣ ಕಸ ವಿಲೇವಾರಿ ಮಾಡಬೇಕೆಂದು ಗ್ರಾಮದ ಮಹದೇವ್, ರವೀಶ್, ಶಿವಣ್ಣ, ಪ್ರಸಾದ್ ಆಗ್ರಹಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.