ಭಾರತೀನಗರ: ಸಮೀಪದ ದೊಡ್ಡರಸಿನಕೆರೆ ಗ್ರಾಮ ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಕುರಿಕೆಂಪನದೊಡ್ಡಿ ಎನ್.ಶಿವಲಿಂಗಯ್ಯ ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷ ಚಂದ್ರಶೇಖರ್, ಉಪಾಧ್ಯಕ್ಷೆ ಸಮೀನಾ ಬಾನು ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಯಾವ ಸದಸ್ಯರೂ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅಧ್ಯಕ್ಷರಾಗಿ ಕೆ.ಎನ್.ಶಿವಲಿಂಗಯ್ಯ, ಉಪಾಧ್ಯಕ್ಷರಾಗಿ ಮುಟ್ಟನಹಳ್ಳಿ ವೀಣಾ ಆಯ್ಕೆಗೊಂಡರು. ಚುನಾವಣಾಧಿಕಾರಿಯಾಗಿ ಕಾಡಾದ ಅಭಿಯಂತರ ಪ್ರಶಾಂತ್ ಕರ್ತವ್ಯ ನಿರ್ವಹಿಸಿದರು. ನೂತನ ಅಧ್ಯಕ್ಷ ಕೆ.ಎನ್.ಶಿವಲಿಂಗಯ್ಯ ಮಾತನಾಡಿದರು.
ನಂತರ ಕುರಿಕೆಂಪನದೊಡ್ಡಿ ಗ್ರಾಮದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮಂಡ್ಯ ವಿವಿ ನಿವೃತ್ತ ಉಪಕುಲಪತಿ ಪ್ರೊ.ಕೆ.ಎನ್.ನಿಂಗೇಗೌಡ ಹಾಗೂ ನೂತನ ಅಧ್ಯಕ್ಷ ಕೆ.ಎನ್.ಶಿವಲಿಂಗೇಗೌಡ ಅವರನ್ನು ಅಭಿನಂದಿಸಲಾಯಿತು.
ಮುಖಂಡರಾದ ಎಸ್.ರಾಜಣ್ಣ, ಸವಿತಾಕೃಷ್ಣ, ವಿಷಕಂಠೇಗೌಡ, ಕೆ.ಎಲ್.ಅರ್ಕೇಶ್, ಕೆ.ಎನ್.ಶೇಖರ್, ಕೆ.ಟಿ.ಅರ್ಕೇಶ್, ಹನುಮಂತು, ಬಿಳಿಯಯ್ಯ, ಪುಟ್ಟಸ್ವಾಮಿ, ರಾಮಲಿಂಗಯ್ಯ, ತಮ್ಮಯ್ಯ, ಟಿ.ಎಂ.ಸುಧಾ, ನಾಗಮಣಿ, ಕರೀಗೌಡ, ಕೆಂಪರಾಜು, ಗ್ರಾಮದ ಜೆಡಿಎಸ್ ಮುಖಂಡ ಶಿವಲಿಂಗೇಗೌಡ (ತೈಲಪ್ಪ) ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.