ಕಿಕ್ಕೇರಿ: ‘ದೇಶ ರಕ್ಷಣೆಗೆ ನಾವಿಲ್ಲಿ ಪ್ರಾರ್ಥಿಸಿದರೆ ಅಲ್ಲಿ ಯೋಧರು ಕ್ಷೇಮದಿಂದಿರಲು ಭಗವಂತನ ಶಕ್ತಿ ಸಿಗಲಿದೆ’ ಎಂದು ಅರ್ಚಕ ಆದಿತ್ಯ ಭಾರಧ್ವಾಜ್ ಹೇಳಿದರು.
ಪಟ್ಟಣದ ಬ್ರಹ್ಮೇಶ್ವರ ದೇಗುಲದಲ್ಲಿರುವ ವಿಘ್ನೇಶ್ವರನಿಗೆ ಶುಕ್ರವಾರ ಸಂಜೆ ಸಂಕಷ್ಟ ಹರ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು.
‘ವಿಘ್ನ, ಆತಂಕ ದೂರಮಾಡುವ ಗಣಪತಿ ಆರಾಧನೆ ಮಾಡದ ಮನಸ್ಸುಗಳು ಇಲ್ಲ. ನಮ್ಮ ದೇಶ ಧರ್ಮ, ಅಧ್ಯಾತ್ಮ, ಭಗವಂತನ ನಂಬಿರುವ ನಾಡು ಆಗಿದೆ. ಮೌಢ್ಯ ಇಲ್ಲದೆ ಭಕ್ತಿ ಶ್ರದ್ಧೆಯಿಂದ ಪೂಜಿಸಬೇಕಿದೆ. ನಮ್ಮ ಒಳಿತಿಗಾಗಿ ಪ್ರಾರ್ಥಿಸುವ ನಾವು ನಮ್ಮ ದೇಶ ರಕ್ಷಣೆ, ದೇಶ ಕಾಯುವ ಯೋಧರ ರಕ್ಷಣೆ, ಕ್ಷೇಮಕ್ಕೆ ಪ್ರಾರ್ಥಿಸಿದರೆ ಒಳಿತಾಗಲಿದೆ’ ಎಂದರು.
‘ವೇದಪುರಾಣಗಳಿಂದಲೂ ಶತ್ರುಗಳ ಕಾಟ ಇದೆ. ದುಷ್ಟಸಂಹಾರಕ್ಕೆ ಭಗವಂತ ವಿವಿಧ ರೀತಿ ಧರೆಗೆ ಆಗಮಿಸಿ ಶಿಷ್ಟರನ್ನು ರಕ್ಷಿಸುತ್ತಾನೆ. ನಮ್ಮ ದೇಶ ಆಧ್ಯಾತ್ಮ, ದೈವಿಶಕ್ತಿಯ ತಪೋಭೂಮಿಯಾಗಿದೆ. ಯೋಧರು ಗಡಿಕಾಯುವ ದೈವಾಂಶ ಸಂಭೂತರು ಎಂದು ಕಾಣಬೇಕು’ ಎಂದು ನುಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.