ADVERTISEMENT

ಕೆ ಆರ್ ಪೇಟೆ| ಗಾಂಜಾ ಸಾಗಾಟ: ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 27 ಜೂನ್ 2025, 15:43 IST
Last Updated 27 ಜೂನ್ 2025, 15:43 IST

ಕೆ ಆರ್ ಪೇಟೆ: ತಾಲ್ಲೂಕಿನ ಚಿಕ್ಕೋನಹಳ್ಳಿ ಕೆಬಿಎಚ್ ಬಡಾವಣೆ ಮುಂಭಾಗದ ಚನ್ನರಾಯಪಟ್ಟಣ-ಮೈಸೂರು ಮುಖ್ಯ ರಸ್ತೆಯಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಅಬಕಾರಿ ಪೊಲೀಸರು ಬಂಧಿಸಿದ್ದಾರೆ.

ಪಾಂಡವಪುರದ ಉಮ್ರಾಜ್ ಬೇಗ್ , ಜಬಿವುಲ್ಲಾ ಅಬ್ದುಲ್ ರಹೀಮ್, ಚನ್ನರಾಯಪಟ್ಟಣದ ಸೈಯದ್ ಹುಸೇನ್ ಬಂಧಿತರು.₹3.5 ಲಕ್ಷ ಮೌಲ್ಯದ 5 ಕೆ.ಜಿ ಒಣಗಾಂಜಾವನ್ನು ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಅಬಕಾರಿ ವೃತ್ತ ನಿರೀಕ್ಷಕ ದೀಪಕ್ ಪ್ರಕರಣ ದಾಖಲಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT