ವಿರಾಜಪೇಟೆ: ಸಮೀಪದ ಕಾಕೋಟುಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಂಗಮೂರೂರು ಗ್ರಾಮದಲ್ಲಿ ಈಚೆಗೆ ಪರಿವಾರ ದೈವಗಳ ವಾರ್ಷಿಕ ನೇಮೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.
ಗ್ರಾಮದ ನಾಲ್ಕನೇ ಮೈಲಿನಲ್ಲಿ ಪಿ.ಸಿ. ಲೋಕೇಶ್ ಎಂಬುವರ ಮನೆಯ ಬಳಿ ನೇಮೋತ್ಸವ ನಡೆಯಿತು.
ಮೊದಲ ದಿನ ರಾತ್ರಿ 8ರಿಂದ ದೇವರ ಅಲಂಕಾರ ಸೇವೆ ಆರಂಭವಾಗಿ ರಾತ್ರಿ 9ಕ್ಕೆ ವಿಶೇಷ ಪೂಜೆಗಳು ನಡೆದವು. ಪಾಷಾಣ ಮೂರ್ತಿ, ಅಣ್ಣಪ್ಪ, ಪಂಜುರ್ಲಿ, ವರ್ಣ ಪಂಜುರ್ಲಿ ದೈವಗಳ ನೇಮ ನಡೆಯಿತು. ಮರುದಿನ ಬೆಳಿಗ್ಗೆ 9ಕ್ಕೆ ಗುಳಿಗ ಹಾಗೂ ಕೊರಗಜ್ಜ ನೇಮ ನಡೆಯಿತು. ಈ ಸಂದರ್ಭ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು.
ಪಿ.ಸಿ. ಲೋಕೇಶ್ ಹಾಗೂ ಕುಟುಂಬ ವರ್ಗ, ಗ್ರಾಮಸ್ಥರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.