ಕೆ.ಆರ್ ಪೇಟೆ: ಪಟ್ಟಣದ ಪುರಸಭಾ ವ್ಯಾಪ್ತಿಯ ಹೊಸಹೂಳಲು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಅವ್ಯವಹಾರ ನಡೆದಿದೆ ಎಂದು ಹಾಲು ಉತ್ಪಾದಕರು ಡೇರಿ ಮುಂದೆ ಶನಿವಾರ ಪ್ರತಿಭಟನೆ ನಡೆಸಿದರು.
ತಲೆಯ ಮೇಲೆ ಹಾಲಿನ ಕ್ಯಾನ್ ಹೊತ್ತು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ಸಂಘದ ಕಾರ್ಯದರ್ಶಿ ಅವ್ಯವಾರದಲ್ಲಿ ತೊಡಗಿದ್ದು, ಅವರೊಂದಿಗೆ ಹಾಲು ಪರೀಕ್ಷಕ ಮತ್ತು ಸಹಾಯಕ ಶಾಮೀಲಾಗಿದ್ದಾರೆ. ಕಳೆದ 43 ದಿನಗಳಿಂದ ಉತ್ಪಾದಕರು ಹಾಕಿರುವ ಹಾಲಿಗೆ ಹಣ ನೀಡಿಲ್ಲ ಎಂದು ಕಿಡಿ ಕಾರಿದರು. ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಶ್ರೀನಿವಾಸ್, ಗೋಪಾಲ ಗೌಡ, ಪ್ರಭು, ಸೂರ್ಯ ಪ್ರಕಾಶ್, ರಾಜೇಶ್, (ಅರುಣ್) ಚೆನ್ನಪ್ಪ, ನಾಗರಾಜು, ಕುಮಾರ್, ಕೆಂಪರಾಜು, ನಾರಾಯಣ, ಶ್ರೀನಿವಾಸ್, ಎಚ್.ಜಿ ಶ್ರೀನಿವಾಸ್, ಮಂಜುಳಮ್ಮ, ನಂದಿನಿ, ಶೈಲಜಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.