ADVERTISEMENT

ಕೆ.ಆರ್.ಪೇಟೆ: ಸಂಭ್ರಮದ ಅಂಜನೇಯಸ್ವಾಮಿ ಉತ್ಸವ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2025, 7:45 IST
Last Updated 25 ಆಗಸ್ಟ್ 2025, 7:45 IST
ಕೆ.ಆರ್.ಪೇಟೆ ಪಟ್ಟಣದ ಕೆರೆಬೀದಿಯಲ್ಲಿರುವ ಕಾರ್ಯಸಿದ್ಧಿ ಆಂಜನೇಯಸ್ವಾಮಿ ಉತ್ಸವ ಮೂರ್ತಿಯ ಮೆರವಣಿಗೆಯು ಶನಿವಾರ ನಡೆಯಿತು
ಕೆ.ಆರ್.ಪೇಟೆ ಪಟ್ಟಣದ ಕೆರೆಬೀದಿಯಲ್ಲಿರುವ ಕಾರ್ಯಸಿದ್ಧಿ ಆಂಜನೇಯಸ್ವಾಮಿ ಉತ್ಸವ ಮೂರ್ತಿಯ ಮೆರವಣಿಗೆಯು ಶನಿವಾರ ನಡೆಯಿತು   

ಕೆ.ಆರ್.ಪೇಟೆ: ಪಟ್ಟಣದ ಕಾರ್ಯಸಿದ್ಧಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಕಡೆ ಶ್ರಾವಣ ಶನಿವಾರದ ಅಂಗವಾಗಿ ವಿಶೇಷ ಪೂಜೆ ಮತ್ತು ದೇವರ ಅಡ್ಡಪಲ್ಲಕ್ಕಿ ಉತ್ಸವ ಸಡಗರ ಮತ್ತು ಸಂಭ್ರಮದಿಂದ ಶನಿವಾರ ನಡೆಯಿತು.

ಮುಂಜಾನೆಯಿಂದಲೇ ದೇವಾಲಯಕ್ಕೆ ಭಕ್ತರು ಆಗಮಿಸಿ ಕಾರ್ಯಸಿದ್ಧಿ ಆಂಜನೇಯಸ್ವಾಮಿ ಮೂರ್ತಿಗೆ ಪೂಜೆ ಸಲ್ಲಿಸಿದರು. ದೇವರ ಮೂರ್ತಿಗೆ ಪಂಚಾಮೃತಾಭಿಷೇಕವು ದೇವಸ್ಥಾನದ ಅರ್ಚಕರಾದ ಸುರೇಶ್ ಕುಮಾರ್ ಮತ್ತು ಆರ್ಚಕ ವೃಂದದ ನೇತೃತ್ವದಲ್ಲಿ ನಡೆಯಿತು, ನಂತರ ಹೋಮ ಮತ್ತು ಹವನಗಳು ನಡೆದವು.

ನಂತರ ಉತ್ಸವ ಮೂರ್ತಿಗೆ ಹೂವಿನ ಆಲಂಕಾರವನ್ನು ಮಾಡಿ ಪಟ್ಟಣದ ರಾಜಬೀದಿಯಲ್ಲಿ ಮೆರವಣಿಗೆಯನ್ನು ಭಕ್ತರು ನಡೆಸಿದರು. ಸಾವಿರಾರು ಮಂದಿ ಮೆರವಣಿಗೆಯಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದರು. ಪಟ್ಟಣದ ಹೇಮಗಿರಿ ರಸ್ತೆಯಲ್ಲಿರುವ ಮುತ್ತುರಾಯಸ್ವಾಮಿ ದೇವಸ್ಥಾನ, ಹೇಮಗಿರಿಯ ಕಲ್ಯಾಣ ವೆಂಕಟರಮಣಸ್ವಾಮಿ ದೇವಸ್ಥಾನ, ಹೊಸಹೊಳಲು ಗ್ರಾಮದ ಲಕ್ಷ್ಮೀನಾರಾಯಣಸ್ವಾಮಿ ದೇವಾಲಯ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ವಿಷ್ಣು ದೇವಾಲಯಗಳಲ್ಲಿ ಕಡೆ ಶ್ರಾವಣ ಶನಿವಾರದ ನಿಮಿತ್ತ ಪೂಜೆ ಪುನಸ್ಕಾರಗಳು ನಡೆದವು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.