ADVERTISEMENT

100 ಅಡಿ ಸನಿಹಕ್ಕೆ ಕೆಆರ್‌ಎಸ್‌ ನೀರಿನ ಮಟ್ಟ

​ಪ್ರಜಾವಾಣಿ ವಾರ್ತೆ
Published 7 ಜುಲೈ 2020, 14:30 IST
Last Updated 7 ಜುಲೈ 2020, 14:30 IST
ಕೆಆರ್‌ಎಸ್‌ ಅಣೆಕಟ್ಟು
ಕೆಆರ್‌ಎಸ್‌ ಅಣೆಕಟ್ಟು   

ಮಂಡ್ಯ: ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆ ಸುರಿಯುತ್ತಿರುವುದರಿಂದ ಕೆಆರ್‌ಎಸ್‌ ಜಲಾಶಯಕ್ಕೆ ಹರಿದು ಬರುತ್ತಿರುವ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು, ಮಂಗಳವಾರ ಸಂಜೆ ಜಲಾಶಯದ ನೀರಿನ ಮಟ್ಟ 99.80 ಅಡಿ ತಲುಪಿದೆ.

ಮಂಗಳವಾರ ಸಂಜೆ ವೇಳೆಗೆ ಒಳಹರಿವು 7,736 ಕ್ಯುಸೆಕ್‌, ಹೊರ ಹರಿವು 451 ಕ್ಯುಸೆಕ್‌ ಇತ್ತು. ಬುಧವಾರ ಬೆಳಿಗ್ಗೆ 6 ಗಂಟೆ ಹೊತ್ತಿಗೆ ನೀರಿನ ಮಟ್ಟ 100 ಅಡಿ ಗಡಿ ದಾಟಲಿದೆ. ಇದೇ ರೀತಿ ಮಳೆ ಮುಂದುವರಿದರೆ ಜುಲೈ ಅಂತ್ಯದ ವೇಳೆ ಜಲಾಶಯ ಭರ್ತಿಯಾಗಲಿದೆ ಎಂದು ಕಾವೇರಿ ನೀರಾವರಿ ನಿಗಮದ ಮೂಲಗಳು ತಿಳಿಸಿವೆ.

ಕಳೆದ ವರ್ಷ ಅ.9ರಂದು ಜಲಾಶಯ ನೂರು ಅಡಿ ದಾಟಿತ್ತು. 2018ರಲ್ಲಿ ಜೂನ್‌ 17ರಂದೇ ನೂರು ಅಡಿ ದಾಟಿತ್ತು. ‘ಜಲಾಶಯ ತುಂಬುತ್ತಿದ್ದು ಈ ವರ್ಷ ಮಂಡ್ಯ ಜಿಲ್ಲೆಯ ಕೃಷಿ ಹಾಗೂ ಬೆಂಗಳೂರು ಜನರಿಗೆ ಕುಡಿಯುವ ನೀರಿನ ಸಮಸ್ಯೆ ಇಲ್ಲ’ ಎಂದು ನಿಗಮದ ಅಧಿಕಾರಿಗಳು ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.