Muttathi: Female leopard dies in fight
ಹಲಗೂರು: ಸಮೀಪದ ಮುತ್ತತ್ತಿ ಕಾವೇರಿ ವನ್ಯಜೀವಿ ವಲಯದ ಅರಣ್ಯ ಪ್ರದೇಶದಲ್ಲಿ ಚಿರತೆಗಳ ಕಾದಾಟದಲ್ಲಿ ಸುಮಾರು 18 ತಿಂಗಳ ವಯೋಮಾನದ ಹೆಣ್ಣು ಚಿರತೆ ಸಾವನ್ನಪಿರುವ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.
ಹೊನ್ನೇಮರದ ಹಳ್ಳದ ಬಳಿ ಎರಡು ಚಿರತೆಗಳು ಕಾದಾಟದಲ್ಲಿ ತೊಡಗಿದ್ದು, ಹೆಣ್ಣು ಚಿರತೆಯ ಹೊಟ್ಟೆಯ ಭಾಗವನ್ನು ಮತ್ತೊಂದು ಚಿರತೆ ತಿನ್ನುತ್ತಿರುವ ದೃಶ್ಯ ವನ್ಯಜೀವಿ ವಲಯದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.
ಸ್ಥಳಕ್ಕೆ ಕಾವೇರಿ ವನ್ಯಜೀವಿ ವಲಯ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿ ಡಿ.ಹೀರಾಲಾಲ್, ಡಿ.ಸಿ.ಎಫ್ ರಾಜು, ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ನಾಗೇಂದ್ರ ಪ್ರಸಾದ್, ವಲಯ ಅರಣ್ಯ ಅಧಿಕಾರಿ ಪ್ರಮೋದ್ ಕುಮಾರ್ ದೇವ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬನ್ನೇರುಘಟ್ಟ ಪ್ರಾದೇಶಿಕ ಸಂಶೋಧನಾ ಕೇಂದ್ರದ ಅಧಿಕಾರಿ ಡಾ. ಮಂಜುನಾಥ್ ಮತ್ತು ಸ್ಥಳೀಯ ವೈದ್ಯರ ತಂಡ ಸೇರಿ ರಾಷ್ಟ್ರೀಯ ಹುಲಿ ಸುರಕ್ಷತಾ ಪ್ರಾಧಿಕಾರ (ಎನ್.ಟಿ.ಸಿ.ಎ) ನಿಯಮಾವಳಿಗಳ ಮಾರ್ಗಸೂಚಿ ಅನ್ವಯ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ನಡೆಸಲಾಯಿತು.
ಈ ಸಂದರ್ಭದಲ್ಲಿ ವನ್ಯಜೀವಿ ಮಂಡಳಿ ಮಾಜಿ ಸದಸ್ಯ ಜಿ.ಮಲ್ಲೇಶಪ್ಪ, ಎನ್.ಟಿ.ಸಿ.ಎ ನಾಮನಿರ್ದೇಶಿತ ಸದಸ್ಯ ಜಿ.ಮಲ್ಲೇಶಪ್ಪ, ಹೊಳೆಮತ್ತಿ ಕನ್ಸರ್ವೇಷನ್ ಫೌಂಡೇಷನ್ ಡೇವಿಡ್ ಕುಮಾರ್, ವನೋದಯ ಫೌಂಡೇಶನ್ ಮಹೇಶ್ ಕುಮಾರ್, ಸ್ಥಳೀಯರಾದ ಕುಮಾರ್, ತಿಮ್ಮೇಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.