ಕಿಕ್ಕೇರಿ: ‘ಸರ್ಕಾರಿ ಬಸ್‌ಗಳಲ್ಲಿ ನಾಗರಿಕರು ಪ್ರಯಾಣಿಸುವ ಮೂಲಕ ಗ್ರಾಮೀಣ ಪ್ರದೇಶಕ್ಕೆ ಸುಲಲಿತವಾಗಿ ಬಸ್ ಓಡಾಡಲು ಸಹಕರಿಸಬೇಕು’ ಎಂದು ಚನ್ನರಾಯಪಟ್ಟಣ ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.
ಹೋಬಳಿಯ ಬೋಳಮಾರನಹಳ್ಳಿ ಗ್ರಾಮಕ್ಕೆ ಚನ್ನರಾಯಪಟ್ಟಣ ತಾಲ್ಲೂಕು ಕೇಂದ್ರದಿಂದ ನಿತ್ಯ ಬಸ್ ಓಡಾಡಲು ನೂತನ ಬಸ್‌ಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ಚನ್ನರಾಯಪಟ್ಟಣದಿಂದ ಬೆಳಿಗ್ಗೆ 7.30ಕ್ಕೆ ಹೊರಟು ಅನೆಗೊಳ, ಗೌಡೇನಹಳ್ಳಿ, ಅಂಚೆಬೀರನಹಳ್ಳಿ, ಬೋಳಮಾರನಹಳ್ಳಿ ಕೊಪ್ಪಲು ಮಾರ್ಗವಾಗಿ ಬೋಳಮಾರನಹಳ್ಳಿ ಗ್ರಾಮಕ್ಕೆ ನಿತ್ಯ ಬಸ್ ಸಂಚರಿಸಲಿದೆ. ಗ್ರಾಮಸ್ಥರ ಬಲುದಿನದ ಬೇಡಿಕೆ ಇದಾಗಿದೆ. ಬಸ್ ಸೇವೆ ಕಲ್ಪಿಸಲಾಗಿದೆ. ಗ್ರಾಮಸ್ಥರು ಸದ್ಬಳಕೆ ಮಾಡಿಕೊಳ್ಳಿ. ಬಸ್ ಪ್ರಯಾಣ ಸೌಲಭ್ಯ ತಮ್ಮ ಗ್ರಾಮಕ್ಕೆ ಉಳಿಯಲು ಸರ್ಕಾರಿ ಬಸ್‌ನಲ್ಲಿಯೇ ಓಡಾಡಬೇಕು’ ಎಂದರು.
ಶಾಸಕ ಎಚ್.ಟಿ. ಮಂಜು ಮಾತನಾಡಿ, ‘ಗ್ರಾಮೀಣ ಪ್ರದೇಶದ ಎಲ್ಲೆಡೆಯ ಶಾಲಾ ಕಾಲೇಜು, ನಾಗರಿಕರಿಗೆ ಅನುಕೂಲವಾಗಲು ಅಗತ್ಯವಾದ ಸ್ಥಳಗಳಿಗೆ ಬಸ್ ಸೌಲಭ್ಯಕ್ಕೆ ಗಮನಹರಿಸಲಾಗುವುದು. ಸಾರಿಗೆ ಇಲಾಖೆ ನಷ್ಟವಾಗದಂತೆ ನೋಡಿಕೊಳ್ಳುವುದು ನಾಗರಿಕರ ಕರ್ತವ್ಯ’ ಎಂದು ಮನವಿ ಮಾಡಿದರು.
ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿರ್ದೇಶಕ ಸಿ.ಎನ್. ಪುಟ್ಟಸ್ವಾಮಿಗೌಡ, ಅನೆಗೊಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಎಂ. ಕಿರಣ್, ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ ಮಾಜಿ ನಿರ್ದೇಶಕ ಬಿ.ಎಸ್. ಮಂಜುನಾಥ್, ಪುಟ್ಟಸ್ವಾಮಿ, ಚನ್ನರಾಯಪಟ್ಟಣ ಬಸ್ ಡಿಪೊ ಮ್ಯಾನೇಜರ್ ನೂತನ್, ಚಾಲಕ ಮಂಜುನಾಥ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.