ADVERTISEMENT

ಮಂಡ್ಯ| ಮಳೆಗೆ ಕುಸಿದ ಮನೆ: 38 ಕುರಿ, ಮೇಕೆ ಸಾವು

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2022, 6:05 IST
Last Updated 2 ಆಗಸ್ಟ್ 2022, 6:05 IST
ಸೋಮವಾರ ರಾತ್ರಿ ಸುರಿದ  ಮಳೆಯಿಂದಾಗಿ ತಾಲ್ಲೂಕಿನ ಉಮ್ಮಡಹಳ್ಳಿ ಗ್ರಾಮದಲ್ಲಿ ಮನೆಯೊಂದು ಕುಸಿದು 38 ಕುರಿ, ಮೇಕೆ ಮೃತಪಟ್ಟಿವೆ.
ಸೋಮವಾರ ರಾತ್ರಿ ಸುರಿದ  ಮಳೆಯಿಂದಾಗಿ ತಾಲ್ಲೂಕಿನ ಉಮ್ಮಡಹಳ್ಳಿ ಗ್ರಾಮದಲ್ಲಿ ಮನೆಯೊಂದು ಕುಸಿದು 38 ಕುರಿ, ಮೇಕೆ ಮೃತಪಟ್ಟಿವೆ.   

ಮಂಡ್ಯ: ಸೋಮವಾರ ರಾತ್ರಿ ಸುರಿದ ಮಳೆಯಿಂದಾಗಿ ತಾಲ್ಲೂಕಿನ ಉಮ್ಮಡಹಳ್ಳಿ ಗ್ರಾಮದಲ್ಲಿ ಮನೆಯೊಂದು ಕುಸಿದು 38 ಕುರಿ, ಮೇಕೆ ಮೃತಪಟ್ಟಿವೆ.

ಗ್ರಾಮದ ಯಶೋದಮ್ಮ ಎಂಬುವವರಿಗೆ ಸೇರಿದ ಕುರಿ, ಮೇಕೆ ಸ್ಥಳದಲ್ಲೇ ಮೃತಪಟ್ಟಿವೆ. ಮನೆಯ ಹಿಂಭಾಗದ ಭಾಗದಲ್ಲಿ ಕುರಿ, ಮೇಕೆಗಳು ಇದ್ದವು. ಮಧ್ಯಾರಾತ್ರಿ 2.30ರ ಸಮಯದಲ್ಲಿ ಮನೆ ಕುಸಿಯಿತು. ಘಟನೆಯಲ್ಲಿ 32 ಕುರಿ, 6 ಮೇಕೆಗಳು ಸತ್ತಿವೆ. ಮನೆಯಲ್ಲಿ ಒಟ್ಟು 50 ಕುರಿ, ಮೇಕೆಗಳಿದ್ದವು. 3 ಕುರಿ ಮಾತ್ರ ಬದುಕಿವೆ, 7 ನಾಪತ್ತೆಯಾಗಿವೆ.

ಗ್ರಾಮ ಪಂಚಾಯಿತಿ, ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು.

ADVERTISEMENT

ಯಶೋದಮ್ಮ ಅವರ ಪತಿ ಅನಾರೋಗ್ಯಪೀಡಿತಾಗಿದ್ದು ಹಾಸಿಗೆ ಹಿಡಿದಿದ್ದಾರೆ. ಯಶೋದಮ್ಮ ಒಬ್ಬರೇ ಕುರಿ, ಮೇಕೆಗಳನ್ನು ಸಾಕುತ್ತಿದ್ದರು. ಮನೆ ಕುಸಿತದಿಂದ ಅವರಿಗೆ ಅಪಾರ ಹಾನಿಯಾಗಿದ್ದು ಜಿಲ್ಲಾಡಳಿತ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.