ADVERTISEMENT

ಮಂಡ್ಯ: ಸಚಿವರ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ

ಅಭಿವೃದ್ಧಿ ವಂಚಿತ ಮಂಡ್ಯಕ್ಕೆ ಮತ್ತೆ ಸ್ವತಂತ್ರ ಬೇಕಿದೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2022, 16:33 IST
Last Updated 15 ಆಗಸ್ಟ್ 2022, 16:33 IST
ಮಂಡ್ಯ ನಗರದ ಸರ್‌ಎಂ.ವಿ.ಕ್ರೀಡಾಂಗಣದಲ್ಲಿ ಪಥಸಂಚಲನ ಮೊಟಕುಗೊಳಿಸಿದ್ದಕ್ಕೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದಾಗ ಪೊಲೀಸರು ಸಮಾಧಾನ ಪಡಿಸಿದರು
ಮಂಡ್ಯ ನಗರದ ಸರ್‌ಎಂ.ವಿ.ಕ್ರೀಡಾಂಗಣದಲ್ಲಿ ಪಥಸಂಚಲನ ಮೊಟಕುಗೊಳಿಸಿದ್ದಕ್ಕೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದಾಗ ಪೊಲೀಸರು ಸಮಾಧಾನ ಪಡಿಸಿದರು   

ಮಂಡ್ಯ: ಬೆಂಗಳೂರಿನಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆಗೆತೆರಳಬೇಕಿರುವುದರಿಂದ ವಿವಿಧಶಾಲೆ ವಿದ್ಯಾರ್ಥಿ ಗಳಪಥಸಂಚಲನಮೊಟಕು ಗೊಳಿ ಸುವಂತೆ ಸಚಿವ ಆರ್.ಅಶೋಕ ಜಿಲ್ಲಾಧಿಕಾರಿ ಎಸ್‌.ಅಶ್ವತಿ ಅವರಿಗೆ ಸೂಚಿಸಿದರು.

ಬೇಸರಗೊಂಡ ವಿದ್ಯಾರ್ಥಿಗಳು, ‘15 ದಿನಗಳಿಂದ ತಾಲೀಮು ನಡೆಸಿದ್ದೇವೆ. ಆದರೆ, ಈಗ ಅವಕಾಶ ನಿರಾಕರಿ ಸಿದ್ದಾರೆ. ನಮ್ಮ ಶ್ರಮಕ್ಕೆ ಬೆಲೆ ಇಲ್ಲವೇ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಧಿಕಾರಿಗಳು, ಪೊಲೀಸರು ಸಮಾಧಾನಪಡಿಸಿದರೂ ವಿದ್ಯಾರ್ಥಿಗಳು ಕೇಳಲಿಲ್ಲ. ಕೊನೆಗೆ ವಿದ್ಯಾರ್ಥಿಗಳ ಒತ್ತಡಕ್ಕೆ ಮಣಿದ ಜಿಲ್ಲಾಡಳಿತ ಪಥ ಸಂಚಲನದಲ್ಲಿ ಭಾಗವಹಿಸಲು ಅವಕಾಶ ನೀಡಿದರು. ಅಷ್ಟರಲ್ಲಿ ಕೆಲವು ಶಾಲೆಗಳ ವಿದ್ಯಾರ್ಥಿಗಳು ಹೊರಟು ಹೋಗಿದ್ದರು.

ADVERTISEMENT

ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಟಿ.ಎಲ್‌.ಕೃಷ್ಣೇಗೌಡ ಮಾತನಾಡಿ, ‘ಗೌರವ ವಂದನೆ ಸ್ವೀಕರಿಸಲು ಸಮಯ ಇಲ್ಲದವರು ಧ್ವಜಾರೋಹಣಕ್ಕೆ ಏಕೆ ಬರಬೇಕು. ಮಕ್ಕಳಿಗೆ ಅಗೌರವ ಅಷ್ಟೇ ಅಲ್ಲ. ಸ್ವಾತಂತ್ರೋತ್ಸವಕ್ಕೆ ಹಾಗೂ ಜಿಲ್ಲೆಗೆ ಮಾಡಿದ ಅಪಮಾನವಾಗಿದೆ’ ಎಂದು ದೂರಿದರು.

ಮಕ್ಕಳಲ್ಲಿ ವಿನಂತಿ ಮಾಡಿದ್ದೇನೆ:ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಬೆಂಗ ಳೂರಿನಲ್ಲೂ ಧ್ವಜಾರೋಹಣ ನೆರವೇರಿ ಸಬೇಕಾಗಿದೆ. ಹಾಗಾಗಿ ಕೂಡಲೇ ತೆರಳಬೇಕಿದೆ. ಅದಕ್ಕಾಗಿ ಮಕ್ಕಳಲ್ಲಿ ವಿನಂತಿ ಮಾಡಿದ್ದೇನೆ’ ಎಂದರು.

‘ಅಭಿವೃದ್ಧಿ ವಂಚಿತ ಜಿಲ್ಲೆಯಾಗಿರುವ ಮಂಡ್ಯಕ್ಕೆ ಅಭಿವೃದ್ಧಿಯ ಸ್ವಾತಂತ್ರ್ಯ ಬೇಕಿದೆ’ ಎಂದು ಕಂದಾಯ ಸಚಿವ ಆರ್‌.ಅಶೋಕ್ ಹೇಳಿದರು.

‘ಜಿಲ್ಲೆಯಲ್ಲಿ ಬಿಜೆಪಿ ಸಂಘಟನೆ ಮಾಡುವುದು ಪ್ರಮುಖವಾಗಿದೆ.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದಂತೆ ಮಂಡ್ಯ ಜಿಲ್ಲೆಯು ಅಭಿವೃದ್ಧಿ ವಂಚಿತವಾಗಿ ನಲುಗುತ್ತಿದೆ. ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ನಾಲೆಗಳ ಅಭಿವೃದ್ಧಿ, ಕುಡಿಯುವ ನೀರು, ಆಸ್ಪತ್ರೆಗಳ ಅಭಿವೃದ್ಧಿಗೆ ಶ್ರಮ ವಹಿಸಲಾಗುತ್ತಿದೆ. ಹಿಂದೆಯೂ ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.