ADVERTISEMENT

ಮಂಡ್ಯ: ಶಿವಳ್ಳಿ-ಹಾಡ್ಯ ನಡುವೆ KSRTC ಬಸ್‌ ಪಲ್ಟಿ- 25 ಪ್ರಯಾಣಿಕರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 5 ಜುಲೈ 2025, 15:08 IST
Last Updated 5 ಜುಲೈ 2025, 15:08 IST
<div class="paragraphs"><p>ಮಂಡ್ಯ: ಶಿವಳ್ಳಿ-ಹಾಡ್ಯ ನಡುವೆ KSRTC ಬಸ್‌ ಪಲ್ಟಿ- 25 ಪ್ರಯಾಣಿಕರಿಗೆ ಗಾಯ</p></div>

ಮಂಡ್ಯ: ಶಿವಳ್ಳಿ-ಹಾಡ್ಯ ನಡುವೆ KSRTC ಬಸ್‌ ಪಲ್ಟಿ- 25 ಪ್ರಯಾಣಿಕರಿಗೆ ಗಾಯ

   

ಮಂಡ್ಯ: ತಾಲ್ಲೂಕಿನ ಶಿವಳ್ಳಿ- ಹಾಡ್ಯ ನಡುವೆ ಶನಿವಾರ ಸಾರಿಗೆ ಸಂಸ್ಥೆ ಬಸ್ ರಸ್ತೆಬದಿಯ ಭತ್ತದ ಗದ್ದೆಗೆ ಮಗುಚಿ ಬಿದ್ದಿದ್ದು, 25ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.

ಮಂಡ್ಯದಿಂದ ಪಾಂಡವಪುರಕ್ಕೆ ತೆರಳುತ್ತಿದ್ದ ಬಸ್‌, ಎದುರಿನಿಂದ ಬರುತ್ತಿದ್ದ ಮತ್ತೊಂದು ವಾಹನಕ್ಕೆ ಜಾಗ ಬಿಡುವ ಪ್ರಯತ್ನದಲ್ಲಿ ನಿಯಂತ್ರಣ ತಪ್ಪಿ ಭತ್ತದ ಗದ್ದೆಗೆ ನುಗ್ಗಿ ಪಲ್ಟಿಯಾಗಿದೆ. 

ADVERTISEMENT

ಬಸ್‌ನಲ್ಲಿದ್ದ 35 ಪ್ರಯಾಣಿಕರು ಇದ್ದರು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಎಲ್ಲರನ್ನು ಸ್ಥಳೀಯರ ನೆರವಿನಿಂದ ಆಂಬುಲೆನ್ಸ್‌ ಮತ್ತು ಖಾಸಗಿ ವಾಹನಗಳ ಮೂಲಕ ಮಂಡ್ಯ ಜಿಲ್ಲಾಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಲಾಗಿದೆ. ಸಣ್ಣಪುಟ್ಟ ಗಾಯಗಳಿಗೆ ಒಳಗಾಗಿದ್ದ ಕೆಲವರು ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಶಿವಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.