ADVERTISEMENT

ಕೊಕ್ಕೊ: ಮಂಡ್ಯ, ಮೈಸೂರು ತಂಡ ಗೆಲುವು

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2023, 15:23 IST
Last Updated 18 ಮಾರ್ಚ್ 2023, 15:23 IST

ಕೆ.ಆರ್.ಪೇಟೆ (ಮಂಡ್ಯ ಜಿಲ್ಲೆ): ಮಂಡ್ಯದ ಬಾಲಕರ ತಂಡ, ಮೈಸೂರಿನ ಬಾಲಕಿಯರ ತಂಡವು ಇಲ್ಲಿ ನಡೆದ ರಾಜ್ಯಮಟ್ಟದ ಕೊಕ್ಕೊ ಟೂರ್ನಿಯಲ್ಲಿ ಪ್ರಥಮ ಬಹುಮಾನ ಮುಡಿಗೇರಿಸಿಕೊಂಡವು.

ಶನಿವಾರ ನಡೆದ ಬಾಲಕರ ವಿಭಾಗದ ಫೈನಲ್‌ ಪಂದ್ಯದಲ್ಲಿ ಹಾವೇರಿ ತಂಡ 10–9 ಅಂಕಗಳಿಂದ ಬೆಂಗಳೂರು ಗ್ರಾಮಾಂತರ ತಂಡವನ್ನು ಸೋಲಿಸಿತು. ನಂತರ ಮಂಡ್ಯ ತಂಡ 15– 9 ಅಂಕಗಳ ಅಂತರದಿಂದ ಹಾವೇರಿ ತಂಡವನ್ನು ಸೋಲಿಸಿ ಪ್ರಥಮ ಬಹುಮಾನ ಪಡೆಯಿತು.

ಬಾಲಕಿಯರ ವಿಭಾಗದ ಫೈನಲ್‌ ಪಂದ್ಯದಲ್ಲಿ ಮೈಸೂರು ತಂಡ 8–4 ಅಂಕಗಳ ಅಂತರದಿಂದ ಶಿವಮೊಗ್ಗ ತಂಡವನ್ನು ಸೋಲಿಸಿ ಪ್ರಥಮ ಬಹುಮಾನ ಪಡೆಯಿತು. ಪ್ರಥಮ ಸ್ಥಾನ ಪಡೆದ ತಂಡದ ಸದಸ್ಯರಿಗೆ ತಲಾ ₹ 10 ಸಾವಿರ ನಗದು, ಟ್ರೋಫಿ, ಪ್ರಶಸ್ತಿ ಪತ್ರ ಪದಾನ ಮಾಡಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.