
ಪ್ರಜಾವಾಣಿ ವಾರ್ತೆ
ಮೈಸೂರು: ಮಂಡಿ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಮೂರು ಮನೆಗೆ ದಾಳಿ ನಡೆಸಿ, ಗಾಂಜಾ ಶೇಖರಿಸಿ ಇಟ್ಟಿದ್ದ ಇಬ್ಬರನ್ನು ಬಂಧಿಸಿದ್ದು, ಅವರಿಂದ 2 ಕೆ.ಜಿ ಗಾಂಜಾ, ₹ 7.30 ಲಕ್ಷ ನಗದು, 10 ತಲವಾರ್ ವಶಕ್ಕೆ ಪಡೆದಿದ್ದಾರೆ.
ಫಿರ್ದೋಜ್ ಹಾಗೂ ರೋಶನ್ ಬೇಗ್ ಬಂಧಿತ ಆರೋಪಿಗಳು.
‘ಗುಪ್ತಚರ ಮಾಹಿತಿ ಆಧರಿಸಿ ಗಾಂಜಾ ಶೇಖರಿಸಿ ಇಟ್ಟಿದ್ದ ಮೂರು ಮನೆಗಳಿಗೆ ದಾಳಿ ನಡೆಸಲಾಗಿದೆ. ನರಸಿಂಹರಾಜ ಎಸಿಪಿ ಮ್ಯಾಥ್ಯೂ ಥಾಮಸ್ ಹಾಗೂ ಮಂಡಿ ಠಾಣಾ ಇನ್‌ಸ್ಪೆಕ್ಟರ್ ನೇತೃತ್ವದಲ್ಲಿ ದಾಳಿ ನಡೆಸಿದಾಗ ದೊರಕಿದ ಗಾಂಜಾ, ನಗದು ಹಾಗೂ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ತಿಳಿಸಿದ್ದಾರೆ.
ಮಂಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.