ಪಾಂಡವಪುರ ಪೀಕಾರ್ಡ್ ಬ್ಯಾಂಕ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಜೆಡಿಎಸ್ ಅಭ್ಯರ್ಥಿಗಳನ್ನು ಅಭಿನಂದಿಸಲಾಯಿತು
ಪಾಂಡವಪುರ: ಇಲ್ಲಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ (ಪೀಕಾರ್ಡ್) ಬ್ಯಾಂಕ್‌ನ ನಿರ್ದೇಶಕರ ಚುನಾವಣೆಯ ಫಲಿತಾಂಶದಲ್ಲಿ ಜೆಡಿಎಸ್ ಬೆಂಬಲಿತ 8 ಹಾಗೂ ರೈತ ಸಂಘ–ಕಾಂಗ್ರೆಸ್ ಬೆಂಬಲಿತ 6 ಮಂದಿ ಆಯ್ಕೆಯಾಗಿದ್ದಾರೆ.
ಪೀಕಾರ್ಡ್ ಬ್ಯಾಂಕ್ ಚುನಾವಣೆಯಲ್ಲಿ ಒಂದೂವರೆ ದಶಕಗಳಿಂದಲೂ ಜೆಡಿಎಸ್ ಬೆಂಬಲಿತರು ಮೇಲುಗೈ ಸಾಧಿಸುತ್ತಿದ್ದಾರೆ. ಸಾಲಗಾರರಲ್ಲದ ಸಾಮಾನ್ಯ ಕ್ಷೇತ್ರದಲ್ಲಿ ಎಂ.ಸಿ.ಯಶವಂತ್‌ಕುಮಾರ್, ಸಾಲಗಾರರ ಕ್ಷೇತ್ರದಿಂದ ಮಾಣಿಕ್ಯನಹಳ್ಳಿ ನಾಗಶೆಟ್ಟಿ, ಸುಂಕಾತೊಣ್ಣೂರು ಕ್ಷೇತ್ರ ಶಿವಣ್ಣ, ಚಿಕ್ಕಾಡೆ ಕ್ಷೇತ್ರ ಎನ್.ಮುರುಳಿ, ಹಿರೇಮರಳಿ ಕ್ಷೇತ್ರ ಚಲುವೇಗೌಡ, ಹರವು ಕ್ಷೇತ್ರ ಸುನಂದಾ, ಬನ್ನಂಗಾಡಿ ಕ್ಷೇತ್ರ ನಂಜೇಗೌಡ, ನಾರಾಯಣಪುರ ಕ್ಷೇತ್ರ ಕೆ.ಕುಮಾರ್ ಆಯ್ಕೆಯಾಗಿದ್ದಾರೆ.
ರೈತ ಸಂಘ–ಕಾಂಗ್ರೆಸ್ ಬೆಂಬಲಿತ ಜಕ್ಕನಹಳ್ಳಿ ಕ್ಷೇತ್ರ ಕೆ.ಆರ್.ಸುರೇಶ್ , ಹಳೇಬೀಡು ಕ್ಷೇತ್ರ ಎಚ್.ಎನ್.ದಯಾನಂದ , ಮಹದೇಶ್ವರಪುರ ಕ್ಷೇತ್ರ ಎಸ್.ಯೋಗಲಕ್ಷ್ಮಿ, ಪಾಂಡವಪುರ ಕ್ಷೇತ್ರ ಎಚ್.ಎಂ.ಆಶಾಲತಾ, ಕೆ.ಬೆಟ್ಟಹಳ್ಳಿ ಕ್ಷೇತ್ರ ಬಿ.ನರೇಂದ್ರಬಾಬು, ಚಿನಕುರಳಿ ಕ್ಷೇತ್ರ ಸಿ.ಎಂ.ಚಂದ್ರಶೇಖರ್ ಗೆಲುವು ಸಾಧಿಸಿದ್ದಾರೆ.
ಫೆಬ್ರುವರಿ 8ರಂದು ಪೀಕಾರ್ಡ್ ಬ್ಯಾಂಕ್‌ನ 14 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಫಲಿತಾಂಶ ಪ್ರಕಟಣೆಗೆ ಕೋರ್ಟ್ ತಡೆಹಿಡಿದಿತ್ತು. ಅನರ್ಹ ಮತದಾರರ ಮತಗಳನ್ನು ಎಣಿಕೆ ಮಾಡಿ ಫಲಿತಾಂಶ ಪ್ರಕಟಿಸುವಂತೆ ಈಗ ಆದೇಶ ನೀಡಿದ್ರರಿಂದ ಶುಕ್ರವಾರ ಮತ ಎಣಿಕೆ ನಡೆಸಿ, ತಾ.ಪಂ.ಇಒ ಲೋಕೇಶ್ ಮೂರ್ತಿ ಫಲಿತಾಂಶ ಪ್ರಕಟಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.