ADVERTISEMENT

ಪಿಇಎಸ್ ಇಂಜಿನಿಯರಿಂಗ್ ಕಾಲೇಜು: ಡಿಜಿಟಲ್ ತಾಂತ್ರಿಕತೆ; ಅಮೋಘ ಸಾಧನೆ

ಪಿಇಎಸ್ ಇಂಜಿನಿಯರಿಂಗ್ ಕಾಲೇಜು: 801 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2025, 5:30 IST
Last Updated 5 ಅಕ್ಟೋಬರ್ 2025, 5:30 IST
<div class="paragraphs"><p>ಮಂಡ್ಯದ ಪಿ.ಇ.ಎಸ್‌. ಎಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ 11 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು.&nbsp;ಪ್ರೊ.ಟಿ.ಜಿ. </p></div>

ಮಂಡ್ಯದ ಪಿ.ಇ.ಎಸ್‌. ಎಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ 11 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು. ಪ್ರೊ.ಟಿ.ಜಿ.

   

ಮಂಡ್ಯ: ‘ಭಾರತದಲ್ಲಿ ಸುಮಾರು 28 ಕೋಟಿ ಜನರಿಗೆ ಓದಲು, ಬರೆಯಲು, ಸಹಿ ಮಾಡಲೂ ಬರುವುದಿಲ್ಲ. ಆದರೆ, ಡಿಜಿಟಲ್ ತಂತ್ರಜ್ಞಾನವನ್ನು ಅತಿ ಹೆಚ್ಚು ಮಂದಿ ಬಳಕೆ ಮಾಡುತ್ತಿದ್ದಾರೆ’ ಎಂದು ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತಿನ ಅಧ್ಯಕ್ಷ ಪ್ರೊ.ಟಿ.ಜಿ. ಸೀತಾರಾಮ್ ತಿಳಿಸಿದರು.

ಪಿ.ಇ.ಎಸ್ ಎಂಜಿನಿಯರಿಂಗ್ ಕಾಲೇಜಿನ ವತಿಯಿಂದ ಎಚ್.ಡಿ. ಚೌಡಯ್ಯ ಸಭಾಂಗಣದಲ್ಲಿ ಶನಿವಾರ ನಡೆದ 16ನೇ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಭಾರತ ತಾಂತ್ರಿಕವಾಗಿ ಮುಂದುವರಿಯುತ್ತಿದ್ದರೂ ಇನ್ನೂ ಈ ದೇಶದಲ್ಲಿ ಶೇ 20ರಷ್ಟು ಮಂದಿ ಅನಕ್ಷರಸ್ಥರಿದ್ದಾರೆ. ಆದರೂ ಡಿಜಿಟಲ್ ತಾಂತ್ರಿಕತೆಯಲ್ಲಿ ಸಾಧನೆ ಮಾಡಿದ್ದೇವೆ ಎಂದು ಹೇಳಿದರು. 

ADVERTISEMENT

‘ತಾಂತ್ರಿಕತೆಯಲ್ಲಿ ಸಾಧನೆ ಮಾಡುತ್ತಿರುವ ನಮ್ಮ ದೇಶದಲ್ಲಿ ಸರ್ಕಾರ ‘ಯುಪಿಐ’ ಜಾರಿಗೊಳಿಸಿ ಡಿಜಿಟಲ್ ಕ್ರಾಂತಿ ಉಂಟು ಮಾಡಿತ್ತು. ಕಾರಣ ಪ್ರತಿಯೊಬ್ಬರೂ ಬ್ಯಾಂಕ್ ಖಾತೆಯನ್ನು ಹೊಂದಿದ್ದಾರೆ. ಎಲ್ಲರೂ ಯುಪಿಐ ಉಪಯೋಗಿಸುವ ಮೂಲಕ ಹಣ ಪಡೆದು, ಪಾವತಿಯಂತಹ ಕ್ರಮಗಳನ್ನು ಅನುಸರಿಸುತ್ತಿದ್ದಾರೆ ಎಂದು ಉದಾಹರಣೆ ಸಮೇತ ವಿವರಿಸಿದರು.

ಕೆವಿಎಸ್‌ ಕೊಡುಗೆ ಅಪಾರ: ಬೆಂಗಳೂರು- ಮೈಸೂರು ಮಧ್ಯದಲ್ಲಿರುವ ಮಂಡ್ಯ ಜಿಲ್ಲೆಯು ರಾಷ್ಟ್ರ ಮಟ್ಟದಲ್ಲೂ ಹೆಸರು ಮಾಡಿದೆ. ನಿತ್ಯ ಸಚಿವರೆಂದೇ ಹೆಸರಾಗಿದ್ದ ಕೆ.ವಿ.ಶಂಕರಗೌಡರು ಗ್ರಾಮೀಣ ಭಾಗದ ಮಕ್ಕಳಿಗೆ ತಾಂತ್ರಿಕ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ಎಂಜಿನಿಯರಿಂಗ್ ಕಾಲೇಜನ್ನು ಪ್ರಾರಂಭಿಸಿ ಲಕ್ಷಾಂತರ ಮಂದಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಹೇಳಿದರು.

ಭಾರತದಲ್ಲಿ 36.06 ಕೋಟಿ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇದರಲ್ಲಿ 4.50 ಕೋಟಿ ಮಂದಿ ಉನ್ನತ ಶಿಕ್ಷಣದಲ್ಲಿದ್ದರೆ, 1.50 ಕೋಟಿ ಐಟಿಐ ಕೌಶಲ ತರಬೇತಿ ಶಿಕ್ಷಣದಲ್ಲಿದ್ದಾರೆ. ಶೇ 94ರಷ್ಟು ಮಕ್ಕಳನ್ನು ಶಾಲಾ ಹಂತದಲ್ಲಿ ದಾಖಲಿಸಲಾಗುತ್ತದೆ. ಹೆಚ್ಚು ಮಂದಿ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ವಿವರಿಸಿದರು.

ಇದೇ ವೇಳೆ 801 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಯುಜಿ ವಿಭಾಗದಲ್ಲಿ 53 ಮತ್ತು ಪಿ.ಜಿ.ವಿಭಾಗದಲ್ಲಿ 15 ವಿದ್ಯಾರ್ಥಿಗಳು ರ್‍ಯಾಂಕ್‌ ಪಡೆದಿದ್ದಾರೆ. ಇವರಲ್ಲಿ ಯು.ಜಿ.ವಿಭಾಗದಿಂದ 6 ಮತ್ತು ಪಿ.ಜಿ.ವಿಭಾಗದಿಂದ 5 ಸೇರಿದಂತೆ ಒಟ್ಟು 11 ಮಂದಿಗೆ ಚಿನ್ನದ ಪದಕಗಳನ್ನು ವಿತರಿಸಲಾಯಿತು.

ಟಾಪರ್‌ಗಳಾದ ಸಿ.ಎಂ.ಹರ್ಷಿತಾ (ಬಿ.ಇ) ಎ.ಪಿ.ಚಂದನಾ (ಎಂ.ಸಿ.ಎ) ಹಾಗೂ ಎಂ.ಆರ್‌. ಹರಿಣಿ (ಎಂ.ಬಿ.ಎ) ಅವರಿಗೆ ‘ಕೆ.ವಿ.ಶಂಕರಗೌಡ ದತ್ತಿ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. 

ಪಿಇಟಿ ಅಧ್ಯಕ್ಷ ಕೆ.ಎಸ್. ವಿಜಯ್ ಆನಂದ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪಿಇಟಿ ಕಾರ್ಯದರ್ಶಿ ಎಸ್.ಎಲ್. ಶಿವಪ್ರಸಾದ್ ಪದವಿ ಪ್ರಮಾಣ ಪತ್ರ ವಿತರಿಸಿದರು. ಕಾಲೇಜಿನ ಪ್ರಾಂಶುಪಾಲ ಎನ್.ಎಲ್. ಮುರಳಿಕೃಷ್ಣ, ಉಪ ಪ್ರಾಂಶುಪಾಲ ವಿನಯ್ ಎಸ್., ಪರೀಕ್ಷಾ ನಿಯಂತ್ರಣಾಧಿಕಾರಿ ಉಮೇಶ್ ಡಿ.ಆರ್., ಡೀನ್ ರುದ್ರೇಶಿ ಅಡ್ಡಮಣಿ ಸಮಾರಂಭದಲ್ಲಿ ಭಾಗವಹಿಸಿದ್ದರು.

ಶಿಸ್ತು ಮತ್ತು ಕಠಿಣ ಪರಿಶ್ರಮವೇ ಯಶಸ್ಸಿಗೆ ರಹದಾರಿ. ಪದವೀಧರರು ತಮ್ಮ ವೃತ್ತಿ ಜೀವನದಲ್ಲಿಯೂ ಈ ಮೌಲ್ಯಗಳನ್ನು ಪಾಲಿಸಿ ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡಬೇಕು
– ಕೆ.ಎಸ್‌.ವಿಜಯ್‌ ಆನಂದ್‌ ಅಧ್ಯಕ್ಷ ಜನತಾ ಶಿಕ್ಷಣ ಟ್ರಸ್ಟ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.