ಕೆ.ಆರ್.ಪೇಟೆ: ಹೇಮಗಿರಿ ಸಮೀಪದ ತ್ರಿಶೂಲ ಪವರ್ ಪ್ಲಾಂಟ್ ಬಳಿ ಅಪರಿಚಿತ ಮಹಿಳೆಯ ಕೈಕಾಲು, ರುಂಡ, ಮುಂಡ ಕತ್ತರಿಸಿ ಕೊಲೆ ಮಾಡಿದ್ದ ಪ್ರಕರಣ ಇಬ್ಬರು ಆರೋಪಿಗಳನ್ನು ಕೆ.ಆರ್.ಪೇಟೆ ಪೊಲೀಸರು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅಶ್ವಿನಿ ತಿಳಿಸಿದರು.
ಪಟ್ಟಣದ ಸಿಪಿಐ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ವರ್ಷ ನ.17ರಂದು ತಾಲ್ಲೂಕಿನ ಹೇಮಗಿರಿಯ ಪವರ್ ಪ್ಲಾಂಟ್ ಬಳಿ ದೇಹದ ಅಂಗಾಂಗಗಳನ್ನು ಕತ್ತರಿಸಿ ಗೋಣಿ ಚೀಲದಲ್ಲಿ ತುಂಬಿದ್ದ ಸ್ಥಿತಿಯಲ್ಲಿ ಮಹಿಳೆಯ ಶವ ನದಿಯಲ್ಲಿ ಪತ್ತೆಯಾಗಿತ್ತು. ಗ್ರಾಮಾಂತರ ಪೊಲೀಸರು ಸಿಪಿಐ ದೀಪಕ್ ನೇತೃತ್ವದಲ್ಲಿ ಪ್ರಕರಣದ ಬೆನ್ನು ಹತ್ತಿದರೂ ಮಾಹಿತಿ ಲಭ್ಯವಾಗಿರಲಿಲ್ಲ. ಪಾಂಡವಪುರ ಠಾಣೆಯಲ್ಲಿ ಮಾರ್ಚ್ 2ರಂದು ದೇಶಿಹಳ್ಳಿಯ ಗೌರಿಶಂಕರ್ ಎಂಬು ವವರು ಮಗಳು ಕಾಣೆಯಾಗಿದ್ದ ಬಗ್ಗೆ ದೂರು ನೀಡಿದ್ದರು.
ಅವರ ಮಗ ಳನ್ನು ದೇಶಿ ಹಳ್ಳಿಯ ರಂಗಪ್ಪಗೆ ಮದುವೆ ಮಾಡಿ ಕೊಡಲಾಗಿತ್ತು. ಮಾವ ಗೌರಿಶಂಕರ್ ಕರೆ ಮಾಡಿ ಮಗಳೊಂದಿಗೆ ಮಾತನಾಡ ಬೇಕು ಎಂದಾಗ ಅಳಿಯ ರಂಗಪ್ಪ ಸಬೂಬು ಹೇಳಿ ತಂದೆಯೊಂದಿಗೆ ಮಾತನಾಡಲು ಅವಕಾಶ ನೀಡುತ್ತಿ ರಲಿಲ್ಲ. ಇದನ್ನು ಗಮನಿಸಿದ ಗೌರಿ ಶಂಖರ್ 3 ತಿಂಗಳ ಬಳಿಕ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದ ರಿಂದಾಗಿ ಪ್ರಕರಣ ಬೆಳಕಿಗೆ ಬಂದಿದೆ.
ಕೆ.ಆರ್.ಪೇಟೆಯ ಸಿಪಿಐ ದೀಪಕ್ ಹಾಗೂ ಸುರೇಶ್ ಮಹಿಳೆಯ ಭಾವಚಿತ್ರವನ್ನು ಹೋಲಿಕೆ ಮಾಡಿ ನೋಡಿದಾಗ ಕೊಲೆಯಾದ ಮಹಿಳೆಯ ಬಗ್ಗೆ ಮಾಹಿತಿ ಖಚಿತವಾಗಿತ್ತು. ಗೌರಿಶಂಕರ್ ಅವರನ್ನು ವಿಚಾರಣೆ ನಡೆಸಿದಾಗ ಅಳಿಯ ರಂಗಪ್ಪನ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು.
ರಂಗಪ್ಪನನ್ನು ವಿಚಾರಣೆ ನಡೆಸಿದಾಗ ಹೆಂಡತಿಯ ನಡತೆ ಹಾಗೂ ಶೀಲದ ಬಗ್ಗೆ ಸಂಶಯ ಇದ್ದುದರಿಂದ ಬಾವ ಚಂದ್ರನೊಂದಿಗೆ ಸೇರಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದ. ಕಬ್ಬು ಕಡಿಯುವ ಮಚ್ಚಿನಿಂದ ಕೊಲೆ ಮಾಡಿ ನಂತರ ಶರೀರವನ್ನು ಕತ್ತರಿಸಿ ಚೀಲಕ್ಕೆ ತುಂಬಿ ಸ್ಕೂಟರ್‌ನಲ್ಲಿ ಸಾಗಿಸಿ ಹೇಮಾವತಿ ನಾಲೆಗೆ ಎಸೆದಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಎಸ್ಪಿ ತಿಳಿಸಿದರು.
ರಂಗಪ್ಪ ಹಾಗೂ ಚಂದ್ರ ಅಲಿಯಾಸ್ ರಾಮಚಂದ್ರ ಅವರನ್ನು ಬಂಧಿಸಿರುವ ಪೊಲೀಸರು ಕೃತ್ಯಕ್ಕೆ ಬಳಸಿದ್ದ ಎರಡು ದ್ವಿಚಕ್ರ ವಾಹನ ವಶಕ್ಕೆ ಪಡೆದಿದ್ದಾರೆ.
ಕೊಲೆ ಪ್ರಕರಣ ಪತ್ತೆಮಾಡುವಲ್ಲಿ ಹೆಚ್ಚುವರಿ ಎಸ್‌ಪಿ ಧನಂಜಯ್, ನಾಗಮಂಗಲ ಉಪವಿಭಾಗದ ಡಿವೈಎಸ್ಪಿ ನವೀನ್‌ಕುಮಾರ್, ವೃತ್ತನಿರೀಕ್ಷಕ ಎಂ.ಕೆ.ದೀಪಕ್, ಗ್ರಾಮಾಂತರ ಪಿಎಸ್ಐ ಸಿ.ಎಸ್.ಸುರೇಶ್, ಪಟ್ಟಣ ಠಾಣೆಯ ಪಿಎಸ್ಐ ಬ್ಯಾಟ ರಾಯಗೌಡ, ಸಿಬ್ಬಂದಿ ಬಿ.ಎಸ್.ಚಂದ್ರಶೇಖರ್, ಬಿ.ಎಸ್.ಉಮೇಶ್, ಶ್ರೀಧರ್, ಶಿವಕುಮಾರ್, ಎಸ್.ಅರುಣ್ ಕುಮಾರ್, ಜಯವರ್ಧನ, ಕೆ.ಶಿವಕುಮಾರ್, ಪಿ.ರೇವಣ್ಣ, ಮನು, ಪ್ರದೀಪ, ಚಾಲಕರಾದ ರವಿ, ವಿರೂಪಾಕ್ಷ, ವಾಸು, ಜಿಲ್ಲಾ ಪೊಲೀಸ್ ಕಚೇರಿ ಸಿಬ್ಬಂದಿ ಎ.ಎಸ್.ಐ.ಕೃಷ್ಣ, ಹೆಡ್‌ಕಾನ್‌ಸ್ಟೆಬಲ್ ರವಿಕಿರಣ್, ಲೋಕೇಶ್, ಪಾಂಡವಪುರ ಠಾಣೆ ಸಿಬ್ಬಂದಿ ಬಿ.ಜೆ.ರೇವಣ್ಣ, ಕೆ.ಪಿ.ಚೇತನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.