ADVERTISEMENT

16 ಕೆ.ಜಿ ಗಾಂಜಾ ಗಿಡ ವಶ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2020, 4:33 IST
Last Updated 16 ಸೆಪ್ಟೆಂಬರ್ 2020, 4:33 IST
ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸರು ಬಂಧಿಸಿರುವ ಆರೋಪಿಯೊಂದಿಗೆ ಗಾಂಜಾ ಗಿಡ 
ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸರು ಬಂಧಿಸಿರುವ ಆರೋಪಿಯೊಂದಿಗೆ ಗಾಂಜಾ ಗಿಡ    

ಕೆ.ಆರ್.ಪೇಟೆ: ತಾಲ್ಲೂಕಿನ ಬಿ.ನಾಟನಹಳ್ಳಿಯ ಎರಡು ಕಡೆ ಗ್ರಾಮಾಂತರ ಪೊಲೀಸರು ದಾಳಿ ಮಾಡಿ ಅಕ್ರಮವಾಗಿ ಬೆಳೆದಿದ್ದ 16 ಕೆ.ಜಿ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡು ವ್ಯಕ್ತಿಯೊಬ್ಬರನ್ನು ಬಂಧಿಸಿದ್ದಾರೆ.

ಗ್ರಾಮದ ಮಂಜೇಗೌಡ ಎಂಬುವವರ ಮನೆ ಹಿಂಭಾಗದ ಅಡಿಕೆ ತೋಟದಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿರುವ ಬಗ್ಗೆ ಮಾಹಿತಿ ಮೇರೆಗೆ ಮಂಗಳವಾರ ಸಂಜೆ ತಹಶೀಲ್ದಾರ್ ನೇತೃತ್ವದಲ್ಲಿ ಪೊಲೀಸರು ದಾಳಿ ಮಾಡಿದರು.

‘ಸ್ಥಳದಿಂದ ಓಡಿ ಹೋಗಲು ಪ್ರಯತ್ನಿಸಿದ ಮಂಜೇಗೌಡನನ್ನು ಹಿಡಿದು ವಿಚಾರಿಸಿದಾಗ ಹೊಲದಲ್ಲಿ 6 ಕೆ.ಜಿ 450 ಗ್ರಾಂ ಗಾಂಜಾ ಬೆಳೆದಿರುವುದು ಪತ್ತೆಯಾಯಿತು. ಅದೇ ಗ್ರಾಮದ ರಾಮೇಗೌಡ ಎಂಬುವವರ ಮನೆ ಹಿಂಭಾಗದ ಹೊಲದಲ್ಲಿ ಬೆಳೆದಿದ್ದ 9 ಕೆ.ಜಿ 800 ಗ್ರಾಂ ಹಸಿ ಗಾಂಜಾ ವಶಪಡೆಸಿಕೊಳ್ಳಲಾಗಿದೆ. ಆರೋಪಿ ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ADVERTISEMENT

ದಾಳಿ ಸಂದರ್ಭದಲ್ಲಿ ತಹಶೀಲ್ದಾರ್ ಎಂ.ಶಿವಮೂರ್ತಿ, ಸಿಪಿಐ ಕೆ.ಎನ್.ಸುಧಾಕರ್, ಎಸ್ಐ ತೊಳಚನಾಯಕ್, ಸಿಬ್ಬಂದಿಗಳಾದ ಬಸಪ್ಪ, ಚಂದ್ರಶೇಖರ್, ಸುಜಾತಾ, ರೇವಣ್ಣ, ವೆಂಕಟೇಶ್, ಅನಿಲ್ ಕುಮಾರ್, ವಿರೂಪಾಕ್ಷ, ರವಿ ಹಾಗೂ ಗ್ರಾಮ ಲೆಕ್ಕಾಧಿಕಾರಿ ನರೇಂದ್ರ, ಕಂದಾಯ ಅಧಿಕಾರಿ ರಾಜಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.