ಕಿಕ್ಕೇರಿ: ಉದ್ಯೋಗ ಖಾತ್ರಿ ಮಾನವ ದಿನವನ್ನು 200ಕ್ಕೆ ಹೆಚ್ಚಿಸಿ ಪ್ರತಿದಿವಸ ಕನಿಷ್ಠ ₹600 ಕೂಲಿ ನಿಗದಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಹೋಬಳಿಯ ಘಟಕ ಹಾಗೂ ತಾಲ್ಲೂಕು ಸಮಿತಿಯವರು ಮಂಗಳವಾರ ಪ್ರತಿಭಟನೆ ನಡೆಸಿ ತಾಲ್ಲೂಕು ಪಂಚಾಯಿತಿ ಇಒ ಸುಷ್ಮಾ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ. ಹನುಮೇಶ್ ಮಾತನಾಡಿ, ‘ಕಾರ್ಮಿಕರಿಗೆ ಕೆಲಸದ ವೇಳೆ ನೆರಳು, ನೀರು, ಅರೋಗ್ಯ ಕಿಟ್ ವ್ಯವಸ್ಥೆ, ಕೆಲಸದ ಸ್ಥಳದಲ್ಲಿ 2 ಬಾರಿ ಫೋಟೋ ತೆಗೆಯುವುದು ಬೇಡ, ಸ್ಮಶಾನದ ಸೌಲಭ್ಯ ಕಲ್ಪಿಸಿಕೊಡಬೇಕು’ ಎಂದು ಆಗ್ರಹಿಸಿದರು.
ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಗಂಗೇನಹಳ್ಳಿ ಗಿರೀಶ್ ಮಾತನಾಡಿ, ‘ಚೌಡೇನಹಳ್ಳಿ, ಲಕ್ಷ್ಮೀಪುರ, ಮಾಕವಳ್ಳಿ, ಹಿರಿಕಳಲೆ, ಮಂದಗೆರೆ, ಆನೆಗೊಳ ಗ್ರಾಮ ಪಂಚಾಯಿತಿಗಳಲ್ಲಿ ನರೇಗಾ ಯೋಜನೆಯಡಿ ಕೆಲಸ ನೀಡುತ್ತಿಲ್ಲ’ ಎಂದು ಆರೋಪಿಸಿದರು.
ಉಪಾಧ್ಯಕ್ಷ ಎನ್. ಸುರೇಂದ್ರ, ತಾಲ್ಲೂಕು ಅಧ್ಯಕ್ಷ ಗಿರೀಶ್, ಕಾರ್ಯದರ್ಶಿ ಗೋಪಾಲ್, ಉಪಾಧ್ಯಕ್ಷ ಸುರೇಶ್, ಜಯಮ್ಮ, ಲಕ್ಷ್ಮಮ್ಮ, ಶಾಂತಮ್ಮ, ಕೆಂಪಮ್ಮ, ರತ್ನಮ್ಮ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.