ADVERTISEMENT

ಪಿಎಸ್‌ಎಸ್‌ಕೆ: ಹಣ ದುರ್ಬಳಕೆ ತಡೆಯಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 2:29 IST
Last Updated 13 ಡಿಸೆಂಬರ್ 2025, 2:29 IST
ಪಿಎಸ್‌ಎಸ್‌ಕೆಯಲ್ಲಿ ಕಾರ್ಮಿಕ ಹೆಸರಿನಲ್ಲಿ ಬ್ಯಾಂಕ್‌ ಸ್ಥಾಪನೆ ಮಾಡಿ ಹಣದ ದುರ್ಬಳಕೆ ಮಾಡುತ್ತಿರುವುದನ್ನು ತಪ್ಪಿಸಬೇಕೆಂದು ನಿವೃತ್ತ ಕಾರ್ಮಿಕರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ಪಿಎಸ್‌ಎಸ್‌ಕೆಯಲ್ಲಿ ಕಾರ್ಮಿಕ ಹೆಸರಿನಲ್ಲಿ ಬ್ಯಾಂಕ್‌ ಸ್ಥಾಪನೆ ಮಾಡಿ ಹಣದ ದುರ್ಬಳಕೆ ಮಾಡುತ್ತಿರುವುದನ್ನು ತಪ್ಪಿಸಬೇಕೆಂದು ನಿವೃತ್ತ ಕಾರ್ಮಿಕರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ಮಂಡ್ಯ: ಪಾಂಡವಪುರ ಪಿಎಸ್‌ಎಸ್‌ಕೆಯಲ್ಲಿ ಕಾರ್ಮಿಕ ಹೆಸರಿನಲ್ಲಿ ಬ್ಯಾಂಕ್‌ ಸ್ಥಾಪನೆ ಮಾಡಿ ಹಣದ ದುರ್ಬಳಕೆ ಮಾಡುತ್ತಿರುವುದನ್ನು ತಪ್ಪಿಸಬೇಕು ಎಂದು ಪಿಎಸ್‌ಎಸ್‌ಕೆ ನಿವೃತ್ತ ಕಾರ್ಮಿಕರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಜಮಾವಣೆಗೊಂಡ ನಿವೃತ್ತ ನೌಕರರು ಬೇಡಿಕೆ ಈಡೇರಿಸಬೇಕೆಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಹಿಂದೆ ಇದ್ದಂತಹ ಕಾರ್ಮಿಕರು ನಿವೃತ್ತಿಯಾಗಿದ್ದು, ಸದಸ್ಯರಾನ್ನಾಗಿ ನೇಮಕ ಮಾಡಿಕೊಳ್ಳದೆ ಕಾರ್ಮಿಕರ ಸಂಸ್ಥೆಯನ್ನು ಮುಂದುವರಿಸುವಂತೆ ವಿನಂತಿಸಿಕೊಂಡರು ಸದಸ್ಯರನ್ನಾಗಿ ನೇಮಕ ಮಾಡಿಕೊಳ್ಳದೆ ವಂಚಿಸಲಾಗಿದೆ. ನಮಗೆ ಸದಸ್ಯತ್ವ ನೀಡದೆ ವಂಚಿಸಿದ ಮೇಲೆ ನಾವು ಕ್ರೂಢೀಕರಿಸಿ ಬ್ಯಾಂಕ್‌ ಅಭಿವೃದ್ಧಿಗೆ ಶ್ರಮವಹಿಸಿರುವ ಹಣವನ್ನು ನ್ಯಾಯವಾಗಿ ನೀಡುವುದು ಅಥವಾ ಸಮಸ್ಯೆ ಬಗೆಹರಿಸಲು ಜಿಲ್ಲಾಡಳಿತ ಮಧ್ಯಪ್ರವೇಶ ಮಾಡಬೇಕು ಎಂದು ಮನವಿ ಮಾಡಿದರು.

ADVERTISEMENT

ಕಾರ್ಮಿಕ ಹೆಸರಿನಲ್ಲಿ 1957ರಲ್ಲಿ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯ(ಪಿಎಸ್‌ಎಸ್‌ಕೆ) ಕಾರ್ಮಿಕರ ಬ್ಯಾಂಕ್‌ ಸ್ಥಾಪನೆ ಆಗುತ್ತದೆ. ಆದರೆ, ನಂತರ ನಿವೃತ್ತಿಯಾದವರಿಗೆ ಯಾವ ಹಕ್ಕು ಇಲ್ಲ ಎನ್ನುತ್ತಾರೆ. ಅಂದು ಬ್ಯಾಂಕ್ ಸ್ಥಾಪನೆ ಮಾಡುವಾಗ ನಮ್ಮ ನೌಕರರ ಶ್ರಮದ ಹಣವು ಅದರಲ್ಲಿದೆ. ನಿವೃತ್ತಿಯಾದ ಮೇಲೆ ನಮಗೆ ಸದಸ್ಯತ್ವನಾದರೂ ನೀಡದೇ ಹೋದರೆ ಹೇಗೆ ಎಂದು ನಿವೃತ್ತ ನೌಕರರಾದ ಯೋಗೇಶ್‌, ಎಂ.ನಂಜೇಗೌಡ ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿ ನಿವೃತ್ತ ನೌಕರರಾದ ರಾಮು, ಪರಮೇಶ್ವರಚಾರಿ, ನಾರಾಯಣ್‌, ಜಯಮ್ಮ, ಶಿವಮ್ಮ, ಸರೋಜಮ್ಮ, ಚಿಕ್ಕತಾಯಮ್ಮ, ಕಮಲಮ್ಮ, ಕೆಂಪಯ್ಯ, ಮಲ್ಲೇಗೌಡ ಭಾಗಹಿಸಿದ್ದರು.‌ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.