ADVERTISEMENT

ಮಂಡ್ಯ | ಮಳೆ–ಗಾಳಿ: 5,601 ವಿದ್ಯುತ್‌ ಕಂಬಗಳಿಗೆ ಹಾನಿ, ಸೆಸ್ಕ್‌ಗೆ ಭಾರಿ ನಷ್ಟ

ಸಿದ್ದು ಆರ್.ಜಿ.ಹಳ್ಳಿ
Published 27 ಜೂನ್ 2025, 2:53 IST
Last Updated 27 ಜೂನ್ 2025, 2:53 IST
ಕೊಡಗು ಜಿಲ್ಲೆಯಲ್ಲಿ ಮಳೆ–ಗಾಳಿಯಿಂದ ನೆಲಕ್ಕುರುಳಿರುವ ವಿದ್ಯುತ್‌ ಕಂಬ ಮತ್ತು ಹರಿದು ಬಿದ್ದಿರುವ ತಂತಿ (ಸಂಗ್ರಹ ಚಿತ್ರ) 
ಕೊಡಗು ಜಿಲ್ಲೆಯಲ್ಲಿ ಮಳೆ–ಗಾಳಿಯಿಂದ ನೆಲಕ್ಕುರುಳಿರುವ ವಿದ್ಯುತ್‌ ಕಂಬ ಮತ್ತು ಹರಿದು ಬಿದ್ದಿರುವ ತಂತಿ (ಸಂಗ್ರಹ ಚಿತ್ರ)    

ಮಂಡ್ಯ: ಈ ಬಾರಿ ಮುಂಗಾರು ಪೂರ್ವ ಮತ್ತು ಮುಂಗಾರು ಮಳೆ–ಗಾಳಿಯಿಂದ ವಿದ್ಯುತ್‌ ಜಾಲಕ್ಕೆ ತೀವ್ರ ಹಾನಿಯಾಗಿದ್ದು, ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮಕ್ಕೆ (ಸೆಸ್ಕ್‌) ಭಾರಿ ನಷ್ಟವಾಗಿದೆ. 

ವಿದ್ಯುತ್‌ ಪೂರೈಕೆಯಲ್ಲಿ ಹೆಚ್ಚು ವ್ಯತ್ಯಯವಾಗಬಾರದೆಂದು ಸೆಸ್ಕ್‌ ದುರಸ್ತಿ ಕಾರ್ಯವನ್ನು ಸಮರೋಪಾದಿಯಲ್ಲಿ ನಡೆಸಿದೆ. ‘ಈಗಾಗಲೇ 5,487 ಕಂಬಗಳನ್ನು ಬದಲಿಸಿದ್ದು, 114 ಕಂಬಗಳನ್ನು ಬದಲಿಸಬೇಕಾಗಿದೆ. ಎಲ್ಲ ಪರಿವರ್ತಕಗಳನ್ನು ಬದಲಿಸಲಾಗಿದೆ. ತಂತಿ ದುರಸ್ತಿಯೂ ಬಹುತೇಕ ಪೂರ್ಣಗೊಂಡಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಪ್ರತಿ ವರ್ಷ ಮಳೆ–ಗಾಳಿ ಮತ್ತು ನೈಸರ್ಗಿಕ ವಿಕೋಪದಿಂದ ಹಾನಿಯಾಗುವ ವಿದ್ಯುತ್‌ ಜಾಲವನ್ನು ಸರಿಪಡಿಸುವ ವೆಚ್ಚವನ್ನು ಭರಿಸುವುದು ಕಷ್ಟಸಾಧ್ಯವಾಗಿದೆ. ಹೀಗಾಗಿ ಎಸ್‌.ಡಿ.ಆರ್‌.ಎಫ್‌ ಮತ್ತು ಎನ್‌.ಡಿ.ಆರ್‌.ಎಫ್‌ ಅಡಿ ಅನುದಾನ ಬಿಡುಗಡೆ ಮಾಡಬೇಕು ಎಂದು ಆಯಾ ಜಿಲ್ಲಾಧಿಕಾರಿಗಳಿಗೆ ಸೆಸ್ಕ್‌ ಪ್ರಧಾನ ವ್ಯವಸ್ಥಾಪಕರು ಪತ್ರ ಬರೆದಿದ್ದಾರೆ.

ADVERTISEMENT
ನಷ್ಟದ ಅಂಕಿ ಅಂಶ
ಕೆ.ಎಂ. ಮುನಿಗೋಪಾಲರಾಜು
‘ದುರಸ್ತಿಗೆ ತುರ್ತು ಕ್ರಮ’
‘ಗುಣಾತ್ಮಕ ಮತ್ತು ತಡೆರಹಿತ ವಿದ್ಯುತ್‌ ಪೂರೈಸಲೆಂದೇ ಸಿಬ್ಬಂದಿಯು ಮಳೆಯನ್ನು ಲೆಕ್ಕಿಸದೆ ಉಪಕರಣಗಳ ದುರಸ್ತಿ ಮಾಡಿದ್ದಾರೆ. ಚಾಮರಾಜನಗರ ಮತ್ತು ಕೊಡಗಿನ ಬೆಟ್ಟ–ಗುಡ್ಡಗಳಲ್ಲಿ ಕಡಿದಾದ ಕಣಿವೆ ಪ್ರದೇಶಗಳಲ್ಲಿ ಹರಸಾಹಸಪಟ್ಟಿದ್ದಾರೆ’ ಎಂದು ಸೆಸ್ಕ್‌ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಮುನಿಗೋಪಾಲರಾಜು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.