ADVERTISEMENT

ಬೆಳಕವಾಡಿ | ‘ಅತ್ಯಾಚಾರ: ಪ್ರಭಾವಿಗಳಿಗೂ ಶಿಕ್ಷೆಯಾಗಲಿ’

ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷೆ ಪಿ.ಕೆ. ಶ್ರೀಮತಿ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2025, 14:29 IST
Last Updated 15 ಏಪ್ರಿಲ್ 2025, 14:29 IST
ಬೆಳಕವಾಡಿ ಸಮೀಪದ ಬೊಪ್ಪೇಗೌಡನಪುರ (ಬಿಜಿಪುರ) ಗ್ರಾಮದಲ್ಲಿ ನಡೆದ ಸಾಮಾಜಿಕ ನ್ಯಾಯಕ್ಕಾಗಿ ಸಾಂಸ್ಕೃತಿಕ ಜಾಥಾಕ್ಕೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಷ್ಟ್ರೀಯ ಅಧ್ಯಕ್ಷೆ ಪಿ.ಕೆ. ಶ್ರೀಮತಿ ಟೀಚರ್ ಚಾಲನೆ ನೀಡಿದರು
ಬೆಳಕವಾಡಿ ಸಮೀಪದ ಬೊಪ್ಪೇಗೌಡನಪುರ (ಬಿಜಿಪುರ) ಗ್ರಾಮದಲ್ಲಿ ನಡೆದ ಸಾಮಾಜಿಕ ನ್ಯಾಯಕ್ಕಾಗಿ ಸಾಂಸ್ಕೃತಿಕ ಜಾಥಾಕ್ಕೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಷ್ಟ್ರೀಯ ಅಧ್ಯಕ್ಷೆ ಪಿ.ಕೆ. ಶ್ರೀಮತಿ ಟೀಚರ್ ಚಾಲನೆ ನೀಡಿದರು   

ಬೆಳಕವಾಡಿ: ಜನವಾದಿ ಮಹಿಳಾ ಸಂಘಟನೆ ಯಾವಾಗಲೂ ಸಮಾನತೆ, ಪ್ರಜಾಪ್ರಭುತ್ವ ಹಾಗೂಮಹಿಳೆಯರ ವಿಮೋಚನೆಗಾಗಿ ಹೋರಾಡುತ್ತಿದೆ ಎಂದು ಕೇರಳದ ಮಾಜಿ ಸಚಿವೆ ಹಾಗೂ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷೆ ಪಿ.ಕೆ. ಶ್ರೀಮತಿ ಟೀಚರ್ ತಿಳಿಸಿದರು.

ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ವತಿಯಿಂದ ಸಾಂಸ್ಕೃತಿಕ ನಾಯಕ ಬಸವಣ್ಣ, ಮಂಟೇಸ್ವಾಮಿ ಹಾಗೂ ಡಾ. ಬಿ. ಅರ್. ಅಂಬೇಡ್ಕರ್ ಸ್ಮರಣಾರ್ಥ  ಮುಟ್ಟನಹಳ್ಳಿ ಗ್ರಾಮದ ದೊಡ್ಡಮ್ಮತಾಯಿ ತೋಪಿನ ಆವರಣದಲ್ಲಿ ಮಂಗಳವಾರ ನಡೆದ ‘ಸಾಮಾಜಿಕ ನ್ಯಾಯಕ್ಕಾಗಿ ಸಾಂಸ್ಕೃತಿಕ ಜಾಥಾ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘40 ವರ್ಷಗಳಿಂದ ದೇಶದಲ್ಲಿರುವ ಅಸಮಾನತೆ ವಿರುದ್ಧ ಹೋರಾಟ ಮಾಡುತ್ತಾ ಬಂದಿದ್ದೇವೆ. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಕೊಟ್ಟಿರುವ ಸಮಾನತೆಯನ್ನು ನಾವು ಹೇಗೆ ಪಡೆದಿದ್ದೇವೆ?, ಅಂಬೇಡ್ಕರ್ ದಲಿತನ ಮನೆಯಲ್ಲಿ ಹುಟ್ಟಿದ್ದಾರೆ ಎಂಬ ಕಾರಣಕ್ಕೆ ಸರ್ಕಾರ ನಡೆಸುತ್ತಿರುವ ಅನೇಕ ನಾಯಕರು ಅಂಬೇಡ್ಕರ್ ಅವರನ್ನು ಅವಮಾನಿಸುವ ಮಾತುಗಳನ್ನಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ಉದ್ಯೋಗ ಖಾತ್ರಿ ಯೋಜನೆಯಡಿ 100ರಲ್ಲಿ 99 ಮಂದಿ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಅಂಗನವಾಡಿ, ಮಧ್ಯಾಹ್ನದ ಬಿಸಿಯೂಟ, ಆಶಾ ಕಾರ್ಯಕರ್ತೆಯಾಗಿ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಆದರೆ ಕೂಲಿ ಬಹಳ ಕಡಿಮೆಯಾಗಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘5 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಕೊಲೆ ಮಾಡಿದ ಕಾರ್ಮಿಕನನ್ನು ಪೊಲೀಸರು ಎನ್‌ಕೌಂಟರ್‌ ಮಾಡಿ ಸಾಯಿಸಿದ್ದಾರೆ. ಆದರೆ ಅನೇಕ ನಾಯಕರು, ಶಾಸಕರು, ಮಂತ್ರಿಗಳು, ಸಂಸದರು ಮಹಿಳೆಯರು ಹಾಗೂ ಮಕ್ಕಳ ಮೇಲೆ ಅತ್ಯಾಚಾರ ಮಾಡಿದ್ದಾರೆ. ಅವರ ಮೇಲೆ ಯಾವುದೇ ಕಾನೂನು ಕ್ರಮ ಮತ್ಎಫ್ಐಆರ್ ದಾಖಲಾಗುತ್ತಿಲ್ಲ. ಇಂತವರಿಗೆ ಸರ್ಕಾರವೇ ಬೆಂಬಲ, ರಕ್ಷಣೆ ನೀಡುತ್ತಿದೆ’ ಎಂದು ಕಿಡಿಕಾರಿದರು.

ಜನವಾದಿ ಮಹಿಳಾ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ ಮಾತನಾಡಿ, ‘ಮಂಟೇಸ್ವಾಮಿ, ಮಹದೇಶ್ವರ, ಸಿದ್ದಪ್ಪಾಜಿ, ರಾಚಪ್ಪಾಜಿ, ದೊಡ್ಡಮ್ಮತಾಯಿ ಅವರ ಸಮಾಜದ ಸುಧಾರಣೆ ಮತ್ತು ಮೌಢ್ಯ ಹೋಗಲಾಡಿಸುವ ಕೆಲಸಗಳನ್ನು ಮುನ್ನೆಲೆಗೆ ತರುವುದಕ್ಕೆ ನಾವು ಮುಂದಾಗೋಣ’ ಎಂದರು.

ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯ ಉಪಾಧ್ಯಕ್ಷೆ ಕೆ.ಎಸ್. ವಿಮಲಾ, ಗೌರಮ್ಮ, ಜಿಲ್ಲಾ ಘಟಕದ ಅಧ್ಯಕ್ಷೆ ಲತಾ, ಸಾಹಿತಿ ಜೆ. ಮಳವಳ್ಳಿ ನಾಗರತ್ನ, ಜಿಲ್ಲಾ ಕಾರ್ಯದರ್ಶಿ ಸುಶೀಲಾ, ಮಂಡ್ಯ ಜಿಲ್ಲಾ ಸಮಿತಿ ಸುನೀತಾ, ಮಂಜುಳಾ, ಗ್ರಾಮ ಪಂಚಾಯಿತಿ ಸದಸ್ಯ ಲಿಂಗರಾಜಮೂರ್ತಿ, ಮಠದ ಆಡಳಿತಾಧಿಕಾರಿ ಬಿ.ಪಿ. ಭರತ್ ರಾಜೇ ಅರಸು, ಎನ್. ಎಲ್. ಭರತ್ ರಾಜ್, ಕೃಷ್ಣೇಗೌಡ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.