ಪಾಂಡವಪುರ: ಹದಗೆಟ್ಟಿರುವ ಪಾಂಡವಪುರ–ಮಂಡ್ಯ ಮುಖ್ಯರಸ್ತೆ ಮತ್ತು ಮಡಿಕೆಪಟ್ಟಣ ಗೇಟ್‌ನಿಂದ ಚಿಕ್ಕಮರಳಿ, ನುಗ್ಗಹಳ್ಳಿ ಗ್ರಾಮಗಳ ಸಂಪರ್ಕ ರಸ್ತೆಗಳನ್ನು ಡಾಂಬರೀಕಣಗೊಳಿಸುವಂತೆ ಒತ್ತಾಯಿಸಿ ಚಿಕ್ಕಮರಳಿ ಗ್ರಾಮದ ಜನರು ಗುರುವಾರ ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ ಮಡಿಕೆಪಟ್ಟಣ ಗೇಟ್ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
‘ಪಾಂಡವಪುರ–ಮಂಡ್ಯ ಮುಖ್ಯರಸ್ತೆ ಚಿಕ್ಕಮರಳಿ ಗೇಟ್ ಬಳಿ ಗುಂಡಿಬಿದ್ದಿರುವ ಪರಿಣಾಮ ಸಂಚಾರ ಕಷ್ಟಕರವಾಗಿದೆ. ಹಲವು ವರ್ಷಗಳಿಂದಲೂ ಗುಂಡಿಬಿದ್ದಿರುವ ಕಾರಣ ಹಲವಾರು ವಾಹನಗಳ ಸವಾರರು ಬಿದ್ದು ಗಾಯಗೊಂಡಿರುವ ಸಾಕಷ್ಟು ಘಟನೆ ನಡೆದಿವೆ. ಆದರೂ ರಸ್ತೆ ಡಾಂಬರೀಕರಣ ಮಾಡಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ತಾಳಿದ್ದಾರೆ’ ಎಂದು ಆರೋಪಿಸಿದರು.
ಈ ಸಂಪರ್ಕ ರಸ್ತೆಯ ಇಕ್ಕೆಲಗಳು ಒತ್ತುವರಿಯಾಗಿದ್ದು, ಕೆಲವರು ಈ ಒತ್ತುವರಿ ಜಾಗದಲ್ಲಿ ಬೆಳೆ ಬೆಳೆಯುತ್ತಿದ್ದಾರೆ. ಈ ಬಗ್ಗೆಯೂ ಅಧಿಕಾರಿಗಳು ಗಮನಹರಿಸಿ ಕ್ರಮಕೈಗೊಳ್ಳಬೇಕಿದೆ ಎಂದು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಬಂದ ಲೋಕೋಪಯೋಗಿ ಇಲಾಖೆ ಎಇಇ ಜಯಕುಮಾರ್, ಮಂಡ್ಯ ಮುಖ್ಯ ರಸ್ತೆಯಲ್ಲಿ ಗುಂಡಿಬಿದ್ದಿರುವ ಜಾಗದಲ್ಲಿ ಗುಂಡಿ ಮುಚ್ಚಿಸಲು ಈಗಾಗಲೇ ಕ್ರಮವಹಿಸಲಾಗುತ್ತಿದೆ. ಉಳಿದಂತೆ ಚಿಕ್ಕಮರಳಿ ಗೇಟ್‌ನಿಂದ ಚಿಕ್ಕಮರಳಿ ಮತ್ತು ನುಗ್ಗಹಳ್ಳಿ ಗ್ರಾಮಗಳ ಸಂಪರ್ಕ ರಸ್ತೆ ಅಭಿವೃದ್ದಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಉಳಿದಂತೆ ರಸ್ತೆ ಒತ್ತುವರಿಯನ್ನು ತೆರವುಗೊಳಿಸಿ ಅಭಿವೃದ್ದಿಪಡಿಸಲಾಗುವುದು ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಂಗಳಾ ನವೀನ್, ಗ್ರಾ.ಪಂ.ಉಪಾಧ್ಯಕ್ಷ ಈರಾಚಾರಿ, ಮುಖಂಡರಾದ ಸುರೇಂದ್ರ, ವಿಶ್ವನಾಥ್, ಪ್ರವೀಣ್, ಸತೀಶ್, ಪಾಂಡಿದೊರೆ, ನವೀನ್ ಕುಮಾರ್, ಉಮೇಶ್, ಚೇತನ್, ರಾಜೇಶ್, ಮಧುಸೂದನ್, ಕುಮಾರ್, ಕಾಂತರಾಜು, ಅರುಣ್, ಇತರರು ಇದ್ದರು.
ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ: ಆರೋಪ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ರಸ್ತೆಯ ಇಕ್ಕೆಲಗಳು ಒತ್ತುವರಿ: ಕ್ರಮಕ್ಕೆ ಆಗ್ರಹ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.