ಕೆ.ಆರ್.ಪೇಟೆ: ಸಹಕಾರ ಸಂಘಗಳು ಉಳಿದರೆ ಗ್ರಾಮೀಣ ಪ್ರದೇಶದ ಆರ್ಥಿಕ ಪ್ರಗತಿ ಸಾಧ್ಯವೆಂದು ಮನ್ಮುಲ್ ನಿರ್ದೇಶಕ ಡಾಲು ರವಿ ಹೇಳಿದರು.
ತಾಲ್ಲೂಕಿನ ಚೌಡೇನಹಳ್ಳಿ, ಮಾಚಹೂಳಲು ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಮತ್ತು ಯಗಚಗುಪ್ಪೆ ಗ್ರಾಮದಲ್ಲಿ ಡೇರಿ ಕಟ್ಟಡ ಲೋಕಾರ್ಪಣೆ ಮತ್ತು ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.
‘ತಾಲ್ಲೂಕಿನ ರೈತರು ಕೃಷಿಯೊಂದಿಗೆ ದೊಡ್ಡ ಮಟ್ಟದಲ್ಲಿ ಹೈನುಗಾರಿಕೆ, ಪಶುಪಾಲನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಆರ್ಥಿಕವಾಗಿ ಸದೃಢರಾಗಲು ನೆರವಾಗಿದೆ. ಹೈನುಗಾರಿಕೆ ಮಾಡುವ ರೈತರು ನಂದಿನಿ ಸಂಸ್ಥೆಯ ಫೀಡ್ಸ್ಅನ್ನು ರಾಸುಗಳಿಗೆ ನೀಡಿದರೆ ಉತ್ತಮ ಹಾಲು ದೊರೆಯುತ್ತದೆ’ ಎಂದು ಸಲಹೆ ನೀಡಿದರು.
ಮನ್ಮುಲ್ ನಿರ್ದೇಶಕ ಎಂ.ಬಿ.ಹರೀಶ್ ಮಾತನಾಡಿ, ‘ಕಲಬೆರಕೆ ಮಾಡದೆ ಗುಣಮಟ್ಟದ ಹಾಲನ್ನು ಡೇರಿಗೆ ನೀಡಿಬೇಕು. ಸಹಕಾರ ಸಂಘಗಳ ಬೆಳವಣಿಗೆಗೆ ಎಲ್ಲರ ಸಹಕಾರ ಅಗತ್ಯ’ ಎಂದರು.
ಚೌಡೇನಹಳ್ಳಿ ಡೇರಿ ಅಧಕ್ಷೆ ರಾಧಾ ಚಂದ್ರೇಗೌಡ, ಸಂಘದ ಕಾರ್ಯದರ್ಶಿ ರಂಜಿತಾ, ಯಗಚಗುಪ್ಪೆ ಡೇರಿ ಅಧ್ಯಕ್ಷೆ ಮಂಗಳಮ್ಮ, ಕಾರ್ಯದರ್ಶಿ ರಾಣಿ ಚಂದ್ರಪ್ಪ, ಮಾಚಹೊಳಲು ಡೇರಿ ಅಧ್ಯಕ್ಷ ಸೋಮಶೇಖರ್, ಸಂಘದ ಕಾರ್ಯದರ್ಶಿ ರಮೇಶ್, ಸಂಘದ ನಿರ್ದೇಶಕರು, ಮನ್ಮುಲ್ ಮಾರ್ಗ ವಿಸ್ತರಣಾಧಿಕಾರಿ ಭಾವನ, ರೈತ ಸಂಘದ ಮುಖಂಡ ಚೌಡೇನಹಳ್ಳಿ ಕೃಷ್ಣೆಗೌಡ ಸೇರಿದಂತೆ ಷೇರುದಾರರು, ಗ್ರಾಮದ ಮುಖಂಡರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.