ಮಂಡ್ಯ: ಭಾರತ–ಚೀನಾ ಗಡಿಯಲ್ಲಿ ಮೃತಪಟ್ಟ ಭಾರತದ ಮೂವರು ಯೋಧರಿಗೆ ಬುಧವಾರ ಬಿಜೆಪಿ ಸದಸ್ಯರು ದೀಪ ಬೆಳಗಿ ಶ್ರದ್ಧಾಂಜಲಿ ಸಲ್ಲಿಸಿದರು.
ಜೆ.ಸಿ.ವೃತ್ತದಲ್ಲಿ ಸೇರಿದ ಕಾರ್ಯಕರ್ತರು ದೀಪ ನಮನ ಸಲ್ಲಿಸಿದರು. ಚೀನಾ ಕುತಂತ್ರದ ವಿರುದ್ಧ ಕಿಡಿಕಾರಿದರು. ಮುಖಂಡ ಶಿವಕುಮಾರ್ ಆರಾಧ್ಯ ಮಾತನಾಡಿ ‘ಕೊರೊನಾ ಸಂಕಷ್ಟ ಸಮಯದಲ್ಲಿ ಚೀನಾ ಸೈನಿಕರು ಭಾರತದ ವಿರುದ್ಧ ಕಾಲು ಕೆರೆದುಕೊಂಡು ಸಂಘರ್ಷಕ್ಕೆ ಇಳಿಯುತ್ತಿದ್ಧಾರೆ. ಇದಕ್ಕೆ ಭಾರತದ ಯೋಧರು ಅವರಿಗೆ ಪ್ರತ್ಯುತ್ತರ ನೀಡಿದ್ಧಾರೆ. ಇಂತಹ ಸಂದರ್ಭದಲ್ಲಿ ಮೂವರು ಯೋಧರು ದೇಶಕ್ಕಾಗಿ ಹುತಾತ್ಮರಾಗಿದ್ದಾರೆ’ ಎಂದರು.
ಸಿ.ಟಿ.ಮಂಜುನಾಥ್, ಬಿ.ಕೃಷ್ಣ, ಮಾದರಾಜ ಅರಸ್, ಹೊಸಹಳ್ಳಿ ಶಿವು, ಕೃಷ್ಣೇಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.