ಸಂತೇಬಾಚಹಳ್ಳಿ: ಇಲ್ಲಿನ ಆಂಜನೇಯ ಸ್ವಾಮಿ ದೇವಾಲಯದ ಬಸವಣ್ಣನಿಗೆ ತಿಥಿ (ಭೂಶಾಂತಿ) ಕಾರ್ಯವನ್ನು ಶನಿವಾರ ಗ್ರಾಮಸ್ಥರು ನೆರವೇರಿಸಿದರು.
ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ. ಮೋಹನ್ ಮಾತನಾಡಿ, ‘ಆಂಜನೇಯಸ್ವಾಮಿ ದೇವಾಲಯಕ್ಕೆ ರಕ್ಷಕನಾಗಿದ್ದ ಬಸವ ಏ.2ರಂದು ಅನಾರೋಗ್ಯದಿಂದ ಮೃತಪಟ್ಟಿತ್ತು. ಗ್ರಾಮಸ್ಥರು ಬಸವನಿಗೆ ಪಶು ಆಹಾರ ಹಾಗೂ ಇತರೆ ತಿನಿಸುಗಳನ್ನು ನೀಡಿ ಸಾಕಿದ್ದರು. ಇಂದು ಭೂಶಾಂತಿ ಕಾರ್ಯವನ್ನು ನೆರವೇರಿಸಿದ್ದೇವೆ. ವಿಶೇಷ ಪೂಜೆ ಸಲ್ಲಿಸಿದ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು’ ಎಂದರು.
ಗೆಳೆಯರ ಬಳಗದ ಅಧ್ಯಕ್ಷ ಗೌಡ ಜಯಕುಮಾರ್, ಕಾರ್ಯದರ್ಶಿ ಕೃಷ್ಣ, ಮುಖಂಡರಾದ ಉಮೇಶ್ ರಾಜ್, ಹುಬ್ಬನಹಳ್ಳಿ ಕುಮಾರ್, ಸುರೇಶ್, ಮರೀಗೌಡ, ಮೊಗಣ್ಣ, ಚೇತನ್, ಸೋಮಶೇಖರ್, ಅರ್ಚಕ ನಂದೀಶ್, ಸಣ್ಣಪ್ಪ, ಕುಮಾರ್, ಮಾಳಗೂರು ಚಂದ್ರಣ್ಣ, ದೊಡ್ಡ ಖ್ಯಾತನಹಳ್ಳಿ ಗೋಪಾಲ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.