
ಮದ್ದೂರು: ತಾಲ್ಲೂಕು ಕೆಸ್ತೂರು ಬಳಿಯ ಅಡಗನಹಳ್ಳಿ ಗ್ರಾಮದ ವಿವಿಧ ದೇವಾಲಯಗಳಲ್ಲಿ ಗುರುವಾರ ರಾತ್ರಿ ಸರಣಿಗಳ್ಳತನವಾಗಿದೆ.
ಗ್ರಾಮದ ಮಹದೇವಮ್ಮ ಹಾಗೂ ಗುಡ್ಡೆ ನಿಂಗೇಶ್ವರ ದೇವಸ್ಥಾನಗಳಲ್ಲಿ ಹುಂಡಿಯನ್ನು ಕದ್ದು ಸಮೀಪದ ನಾಲೆಗೆ ಹುಂಡಿಯನ್ನು ಎಸೆದು ಕಳ್ಳರು ಪರಾರಿಯಾಗಿದ್ದಾರೆ. ಅಷ್ಟೇ ಅಲ್ಲದೇ ಗುಂಜಮ್ಮ ದೇಗುಲದಲ್ಲಿ ಚಿನ್ನದ ತಾಳಿ ಹಾಗೂ ಬೆಳ್ಳಿ ದೇವರ ಪದಾರ್ಥಗಳನ್ನ ಕದ್ದು ಪರಾರಿ ಆಗಿದ್ದಾರೆ.
ಕಳೆದ ಮೂರು ದಿನಗಳಿಂದ ಗ್ರಾಮದಲ್ಲಿ ಮಂಚಮ್ಮ ದೇವಿ ನೂತನ ವಿಗ್ರಹ ಪ್ರತಿಷ್ಠಾಪನಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಧಾರ್ಮಿಕ ಕಾರ್ಯಕ್ರಮ ಇದ್ದ ಕಾರಣ ಹುಂಡಿಯಲ್ಲಿ ಹೆಚ್ಚಿನ ಹಣ ಸಂಗ್ರಹವಾಗಿತ್ತು, ಇದನ್ನು ಗಮನಿಸಿ ಕಳ್ಳರು ಕಳ್ಳತನ ಮಾಡಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಸ್ಥಳಕ್ಕೆ ಕೆಸ್ತೂರು ಪೊಲೀಸರು ಆಗಮಿಸಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.