ADVERTISEMENT

ಹಲಗೂರು: ಶಿಂಷಾ ನದಿಯಲ್ಲಿ ಯುವಕ ನೀರು ಪಾಲು

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 5:59 IST
Last Updated 18 ಜುಲೈ 2025, 5:59 IST
ಹಲಗೂರು ಸಮೀಪದ ತೊರೆಕಾಡನಹಳ್ಳಿ ಬಳಿ ನೀರಿನಲ್ಲಿ ಕೊಚ್ಚಿ ಹೋದ ಅರುಣ್ ನನ್ನು ಪೊಲೀಸರು ಮತ್ತು ಅಗ್ನಿ ಶಾಮಕ ದಳ ಸಿಬ್ಬಂದಿ ಪತ್ತೆ ಹಚ್ಚುವ ಕಾರ್ಯದಲ್ಲಿ ನಿರತರಾರುವುದು 
ಹಲಗೂರು ಸಮೀಪದ ತೊರೆಕಾಡನಹಳ್ಳಿ ಬಳಿ ನೀರಿನಲ್ಲಿ ಕೊಚ್ಚಿ ಹೋದ ಅರುಣ್ ನನ್ನು ಪೊಲೀಸರು ಮತ್ತು ಅಗ್ನಿ ಶಾಮಕ ದಳ ಸಿಬ್ಬಂದಿ ಪತ್ತೆ ಹಚ್ಚುವ ಕಾರ್ಯದಲ್ಲಿ ನಿರತರಾರುವುದು    

ಹಲಗೂರು: ಮೀನು ಹಿಡಿಯಲು ಹೋಗಿದ್ದ ಅನೇಕಲ್ ತಾಲ್ಲೋಕಿನ ಬನ್ನೇರುಘಟ್ಟ ಸಮೀಪದ ಬ್ಯಾಡರಾಯನದೊಡ್ಡಿ ಗ್ರಾಮದ ಅರುಣ್ (24) ಶಿಂಷಾ ನದಿಯಲ್ಲಿ ಕೊಚ್ಚಿ ಹೋದ ಘಟನೆ ಸಮೀಪದ ತೊರೆಕಾಡನಹಳ್ಳಿ ಸೇತುವೆ ಬಳಿ ಬುಧವಾರ ತಡರಾತ್ರಿ ನಡೆದಿದೆ. 

4 ಮಂದಿ ಸಹಪಾಟಿಗಳೊಂದಿಗೆ ಅರುಣ್ಮೀನು ಹಿಡಿಯಲು ಬಂದಿದ್ದರು. ಶಿಂಷಾ ನದಿ ಪಾತ್ರದಲ್ಲಿ ಮಳೆಯ ಪ್ರಮಾಣ ಹೆಚ್ಚಾದ ಪರಿಣಾಮ ಇಗ್ಗಲೂರು ಅಣೆಕಟ್ಟಿನಿಂದ ಹೆಚ್ಚಿನ ಪ್ರಮಾಣದ ನೀರನ್ನು ರಾತ್ರಿ ಶಿಂಷಾ ನದಿಗೆ ಹರಿಬಿಡಲಾಗಿದೆ. ಮಧ್ಯರಾತ್ರಿ 2 ಗಂಟೆಯ ಸಮಯದಲ್ಲಿ ಸೇತುವೆ ಕೆಳಗಡೆ ಕುಳಿತು ಮೀನು ಹಿಡಿಯಲು ಹೋಗಿದ್ದವರಿಗೆ ಏಕಾಏಕಿ ನೀರು ಅಪ್ಪಳಿಸಿದೆ. ಗಾಬರಿಗೊಂಡು ಒಂದೆಡೆ ಓಡಿ ಹೋದ ನಾಲ್ವರು ದುರಂತದಿಂದ ಪಾರಾಗಿದ್ದಾರೆ. ವಿರುದ್ದ ದಿಕ್ಕಿನಡೆಗೆ ಈಜಲು ಹೋದ ಅರುಣ್ ನದಿಯ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ.

ಹಲಗೂರು ಪಿಎಸ್‌ಐ ಲೋಕೇಶ ಮತ್ತು ಮಳವಳ್ಳಿ ಅಗ್ನಿಶಾಮಕ ಠಾಣಾ ಅಧಿಕಾರಿ ಅರುಣ್ ಮತ್ತು ಶ್ರೀಧರ್ ನೇತೃತ್ವದ ತಂಡ ಘಟನಾ ಸ್ಥಳಕ್ಕೆ ಆಗಮಿಸಿ ಅರುಣ್ ಪತ್ತೆ ಹಚ್ಚುವ ಕಾರ್ಯಚಾರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಕುರಿತು ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.